ಮಸ್ಕತ್: ಮುಂಬೈ ಮೂಲದ ವ್ಯಕ್ತಿ ನಿಧನ; ದಫನ ಕಾರ್ಯ ನೆರವೇರಿಸಿದ ಸೋಶಿಯಲ್ ಫೋರಮ್
ಮಸ್ಕತ್ : ಹಲವು ದಿನಗಳಿಂದ ಬರ್ಕಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಬೈ ಥಾಣೆ ನಿವಾಸಿ ನೂರುದ್ದೀನ್ ಅಬ್ದುಲ್ಲಾ ಖತ್ರಿ (41) ಶುಕ್ರವಾರ ಮುಂಜಾನೆ ಮೃತಪಟ್ಟಿದ್ದು, ಅವರ ಅಂತಿಮ ವಿಧಿವಿಧಾನವನ್ನು ಸೋಶಿಯಲ್ ಫೋರಮ್ ಒಮನ್ ತಂಡವು ನೆರವೇರಿಸಿದೆ.
ಮೃತರ ಕುಟುಂಬಸ್ಥರು ಸೋಶಿಯಲ್ ಫೋರಮ್ ತಂಡವನ್ನು ನೆರವಿಗಾಗಿ ಸಂಪರ್ಕಿಸಿದ್ದು ಕೂಡಲೇ ಪ್ರವೃತ್ತರಾದ ಕಾರ್ಯಕರ್ತರ ತಂಡವು ಕೋವಿಡ್ ನಿಯಮಾವಳಿ ಪ್ರಕಾರ ಸ್ಥಳಕ್ಕೆ ಧಾವಿಸಿ ಅಮರಾತ್ ನಲ್ಲಿ ಅಂತಿಮ ವಿಧಿವಿಧಾನವನ್ನು ನೆರವೇರಿಸಿದರು.
ಮೃತ ನೂರುದ್ದೀನ್ ಅವರು ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ವೃತ್ತಿ ನಿರ್ವಹಿಸುತ್ತಿದ್ದರು. ಮೃತರು ಅನಾರೋಗ್ಯ ಪೀಡಿತರಾಗಿ ಕಳೆದ 21 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸೋಶಿಯಲ್ ಫೋರಮ್ ಒಮನ್ ತಂಡ ತಿಳಿಸಿದೆ.
ದಫನ ಕಾರ್ಯದಲ್ಲಿ ಸುಹೈಲ್ ಆತೂರ್, ಅನ್ವರ್ ಕಾಪು, ಆಸಿಫ್ ಪಡುಬಿದ್ರೆ, ಫೈಝಲ್ ಕಲ್ಲಡ್ಕ, ಶಾಯಿಬಾನ್ ಜಲ್ಲಿಗುಡ್ಡೆ, ರಫೀಕ್ ಸುಳ್ಯ ಹಾಗು ಇತರರು ಪಾಲ್ಗೊಂಡಿದ್ದರು.