ರೋವಿಂಗ್: ಸೆಮಿ ಫೈನಲ್ ಗೆ ತಲುಪಿ ಇತಿಹಾಸ ನಿರ್ಮಿಸಿದ ಅರ್ಜುನ್ ಲಾಲ್, ಅರವಿಂದ್ ಸಿಂಗ್
Update: 2021-07-25 06:23 GMT
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ರೋವರ್‌ಗಳಾದ ಅರ್ಜುನ್ ಲಾಲ್ ಜಾಟ್ ಹಾಗೂ ಅರವಿಂದ್ ಸಿಂಗ್ ಪುರುಷರ ಲೈಟ್ ವೇಟ್ ಡಬಲ್ ಸ್ಕಲ್ಸ್ ರಿಪಿಚೇಜ್ 2ನೇ ಸುತ್ತಿನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು.
ಒಲಿಂಪಿಕ್ಸ್ ನಲ್ಲಿ ಅಂತಿಮ-4ರ ಸುತ್ತು ತಲುಪಿದ ಭಾರತದ ಮೊದಲ ರೋವರ್ ಗಳೆನಿಸಿಕೊಂಡ ಅರ್ಜುನ್ ಹಾಗೂ ಅರವಿಂದ್ ಇತಿಹಾಸ ನಿರ್ಮಿಸಿದರು.
ಪೋಲೆಂಡ್‌ನ ಜೆರ್ಜಿ ಕೊವಾಲ್ಸ್ಕಿ ಹಾಗೂ ಆರ್ಟೂರ್ ಮಿಕೋಲಾಜ್‌ಜೆವ್ಸ್ಕಿ 6: 43.44 ರ ಸಮಯದೊಂದಿಗೆ ಗುರಿ ತಲುಪಿ ಅಗ್ರಸ್ಥಾನದಲ್ಲಿದ್ದಾರೆ, ನಂತರ ಸ್ಪೇನ್‌ನ ಕ್ಯಾಟಾನೊ ಹೊರ್ಟಾ ಪೊಂಬೊ ಮತ್ತು ಮ್ಯಾನೆಲ್ ಬಾಲಸ್ಟೆಗುಯಿ ಅವರು 6: 45.71 ಸಮಯದಲ್ಲಿ ಗುರಿ ತಲುಪಿದ್ದಾರೆ.
ಸೆಮಿಫೈನಲ್ ಸುತ್ತು ಜುಲೈ 27 ರಂದು ನಡೆಯಲಿದೆ.