ಯುಎಇ: ಭಾರತದಿಂದ ವಿಮಾನಯಾನಗಳ ಮೇಲಿನ ನಿರ್ಬಂಧ ಆ.2ರವರೆಗೆ ವಿಸ್ತರಣೆ

Update: 2021-07-26 14:51 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.26: ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ಕ್ಕೆ ಭಾರತದಿಂದ ಪ್ರಯಾಣಿಕ ವಿಮಾನಯಾನಗಳನ್ನು ಆ.2ರವರೆಗೆ ನಿರ್ಬಂಧಿಸಲಾಗಿದೆ ಎಂದು ಅಲ್ಲಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್ವೇಸ್ ಸೋಮವಾರ ತಿಳಿಸಿದೆ.

‘ಭಾರತದಿಂದ ವಿಮಾನಗಳ ಆಗಮನವನ್ನು ಆ.2ವರೆಗೆ ನಿರ್ಬಂಧಿಸಲಾಗಿದೆ ಎಂದು ನಮಗೆ ದೃಢಪಡಿಸಲಾಗಿದೆ. ಯುಎಇ ಅಧಿಕಾರಿಗಳ ನಿರ್ದೇಶಗಳನ್ನು ಅವಲಂಬಿಸಿ ಈ ದಿನಾಂಕವು ಇನ್ನಷ್ಟು ವಿಸ್ತರಣೆಗೊಳ್ಳಬಹುದು’ ಎಂದು ಎತಿಹಾದ್ ಏರವೇಸ್ ಗೆಸ್ಟ್ ರಿಲೇಷನ್ಸ್ ಟ್ವೀಟಿಸಿದೆ.

ಕಳೆದ ತಿಂಗಳು ಕೆನಡಾ ಸರಕಾರವು ಡೆಲ್ಟಾ ಪ್ರಭೇದದ ಕಾರಣವನ್ನು ನೀಡಿ ಭಾರತದಿಂದ ಪ್ರಯಾಣಿಕ ವಿಮಾನಗಳ ಆಗಮನದ ಮೇಲಿನ ನಿರ್ಬಂಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News