ಒಲಿಂಪಿಕ್ಸ್ :ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಅತನು ದಾಸ್ ಗೆ ಸೋಲು
Update: 2021-07-31 06:18 GMT
ಟೋಕಿಯೊ: ಭಾರತಕ್ಕೆ ಬಿಲ್ಲುಗಾರಿಕೆಯಲ್ಲಿ ಒಲಿಂಪಿಕ್ಸ್ ಪದಕವು ಕನಸಾಗಿಯೇ ಉಳಿದಿದೆ. ವಿಶ್ವದ ನಂಬರ್ ಬಿಲ್ಗಾರ್ತಿ ದೀಪಿಕಾ ಕುಮಾರಿ ಕೊರಿಯಾದ ಆನ್ ಸ್ಯಾನ್ ವಿರುದ್ಧ ಕೊನೆಯ ಎಂಟರ ಹಂತದಲ್ಲಿ ಸೋತ ಮರುದಿನ, ಭಾರತದ ಬಿಲ್ಲುಗಾರ ಆತನು ದಾಸ್ ಶನಿವಾರ ಇಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದರು.
ಕೊನೆಯ -32 ರ ಹಂತದಲ್ಲಿ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಓಹ್ ಜಿನ್ ಹ್ಯೆಕ್ ಅವರನ್ನು ಸೋಲಿಸಿದ್ದ ದಾಸ್, 2012 ರ ಆವೃತ್ತಿಯಲ್ಲಿ ಬೆಳ್ಳಿ ವಿಜೇತ ತವರಿನ ನೆಚ್ಚಿನ ಬಿಲ್ಲುಗಾರ ತಕಹರು ಫರುಕಾವಾ ಅವರನ್ನು ಸೋಲಿಸಲು ವಿಫಲರಾದರು ಮತ್ತು ತೀವ್ರ ಐದು ಸೆಟ್ ಗಳ ಪೈಪೋಟಿಯಲ್ಲಿ 4-6 ಅಂತರದಲ್ಲಿ ಸೋತರು. ಅತನು ಸೋಲಿನೊಂದಿಗೆ ಆರ್ಚರಿಯಲ್ಲಿ ಭಾರತದ ಪದಕ ಗೆಲ್ಲುವ ಕನಸು ಕಮರಿದೆ.