ಮಗುವಿನ ಮೈಗಂಟಿಕೊಂಡಿದ್ದ ಅವಳಿಯಂಥ ರಚನೆಯನ್ನು ತೆಗೆದು ಹಾಕಿದ ಸೌದಿ ವೈದ್ಯರು
Update: 2021-07-31 17:55 GMT
ರಿಯಾದ್ (ಸೌದಿ ಅರೇಬಿಯ), ಜು. 31: ಸೌದಿ ಅರೇಬಿಯದ ವೈದ್ಯರ ತಂಡವೊಂದು ಯೆಮನ್ ಮಗುವೊಂದರ ಮೈಗಂಟಿಕೊಂಡ ಅವಳಿಯಂಥ ರಚನೆಯನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸೌದಿ ವೈದ್ಯರ 50ನೇ ಯಶಸ್ವಿ ಸಯಾಮಿ ಅವಳಿ ಶಸ್ತ್ರಚಿಕಿತ್ಸೆಯಾಗಿದೆ.
ಮಗು ಆಯಿಶಾ ಅಹ್ಮದ್ ಸಯೀದ್ ಸರಿಯಾದ ಬೆಳವಣಿಗೆ ಬಳಿಕವೇ ಜನಿಸಿದೆ. ಆದರೆ ಮಗುವಿಗೆ ಹೆಚ್ಚುವರಿ ಪೆಲ್ವಿಸ್ ಮತ್ತು ಕೆಳಭಾಗದಲ್ಲಿ ಹೆಚ್ಚುವರಿ ಬೆಳವಣಿಗೆಗಳಿದ್ದವು. ಅದನ್ನು ಬೇರ್ಪಡಿಸಲು ವೈದ್ಯರು, ತಂತ್ರಜ್ಞರು ಮತ್ತು ನರ್ಸ್ಗಳನ್ನೊಳಗೊಂಡ 25 ಮಂದಿಯ ತಂಡಕ್ಕೆ 7 ಗಂಟೆ 45 ನಿಮಿಷಗಳು ಬೇಕಾದವು ಎಂದು ಕಿಂಗ್ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ ತಿಳಿಸಿದೆ.