ದುಬೈ: ಎಸ್ಕೆಎಸ್ಸೆಸ್ಸೆಫ್, ವಿಖಾಯ ಕರ್ನಾಟಕ ಯುಎಇ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-16 04:57 GMT

ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಮತ್ತು ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಸೈಯದ್ ಅಸ್ಗರ್ ಅಲಿ ತಂಙಳ್ ಅಧ್ಯಕ್ಷತೆಯಲ್ಲಿ ಆ.15ರಂದು ಅವರ ನಿವಾಸದಲ್ಲಿ ಆಚರಿಸಲಾಯಿತು.

ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಸೈಯದ್ ಅಸ್ಗರ್ ಅಲಿ ತಂಙಳ್ ಮಾತನಾಡಿ, ಇತಿಹಾಸ ಮರೆಮಾಚಲು ಪ್ರಯತ್ನಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ 75 ವರ್ಷಗಳ ಹಿಂದೆ ನಮ್ಮ ಪೂರ್ವಜರ ತ್ಯಾಗದಿಂದ ಪಡೆದ ಸ್ವಾತಂತ್ರ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.

ಕಾರ್ಯಕ್ರಮದಲ್ಲಿ ವಿಖಾಯ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ನವಾಝ್ ಬಿ.ಸಿ.ರೋಡ್, ಕಾರ್ಯದರ್ಶಿ ನಾಸಿರ್ ಬಪ್ಪಳಿಗೆ, ಸಂಚಾಲಕ ಅಝೀಝ್ ಸೋಂಪಾಡಿ, ಸಮಿತಿಯ ಪ್ರಮುಖರಾದ ನಿಝಾಮ್ ತೋಡಾರು, ಅಲಿ ಈಶ್ವರಮಂಗಲ,  ಮುಹಮ್ಮದ್ ಪರ್ಲಡ್ಕ ರೆಡ್ ಟ್ಯಾಗ್, ಮುಸ್ತಫ ಎಚ್.ಎಂ.ಟಿ. ಮಾರ್ಬಲ್, ಝುಬೈರ್ ಕೊಡಿನೀರು, ಝಿಯಾದ್ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

ಕರ್ಣಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೀಫ್ ಕೊಡಿನೀರು ಸ್ವಾಗತಿಸಿದರು. ವಿಖಾಯ ಕರ್ನಾಟಕ ಯುಎಇ ಸಮಿತಿಯ ಕೋಶಾಧಿಕಾರಿ ಸಿರಾಜ್ ಬಿ.ಸಿ.ರೋಡ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News