ಕತರ್ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2021-08-17 03:52 GMT

ದೋಹ : ಕತರ್ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯದ‌ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸ ಲಾಯಿತು. ಐಕ್ಯಗೀತೆಯನ್ನು ಹಾಡುವ ಮುಖಾಂತರ ಕಾರ್ಯಕ್ರಮವು ಚಾಲನೆಗೊಂಡು, ಅಫ್ರಿದಿ ಮಂಗಳೂರು ಸ್ವಾಗತಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಷನ್ (KMCA) ನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸಲಹೆಗಾರರಾದ ಸಾಖಿಬ್ ರಝಾ ಖಾನ್ ಮಾತನಾಡಿ, ಸ್ವಾತಂತ್ರ್ಯದ ಹೋರಾಟದಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗದ ಜನರು ಭಾಗಿಯಾಗಿದ್ದರು. ಆದರೆ ಇಂದು ಜಾತಿ, ಮತ ಭೇದಗಳ ನುಸುಳುವಿಕೆಯಿಂದಾಗಿ, ಕೆಲ ವರ್ಗದ ಜನರಿಗೆ ಸಂಪೂರ್ಣ ಸ್ವಾತಂತ್ರ್ಯ ಮರೀಚಿಕೆಯಾಗಿದೆ.  ಪ್ರತಿಯೊಬ್ಬರೂ ಸಂಘಟಿತರಾದಾಗ ಮಾತ್ರ ಎಲ್ಲಾ ವರ್ಗದ ಜನರು ತಾವು ಕಳೆದುಕೊಂಡಿರುವ ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮರಳಿ ಪಡೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ವಹಿಸಿದ್ದ ಕತರ್ ಇಂಡಿಯನ್ ಸೋಷಿಯಲ್ ಪೋರಂ ಕರ್ನಾಟಕ‌ ರಾಜ್ಯಾಧ್ಯಕ್ಷ‌ ನಝೀರ್‌ ಪಾಷಾ ಮಾತನಾಡಿ, ಸ್ವಾತಂತ್ರ್ಯ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ  ಘನತೆಯಿಂದ ಜೀವಿಸುವ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕೊಟ್ಟಿದೆ ಎಂದು ಹೇಳಿದರು.

ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅಧ್ಯಕ್ಷ ರಿಝ್ವಾನ್ ಅಹ್ಮದ್, ಇಂಡಿಯಾ ಫ್ರೆಟರ್ನಿಟಿ ಫೋರಂ, ಕರ್ನಾಟಕ‌ ರಾಜ್ಯ ಸಮಿತಿ ಸದಸ್ಯ ಅಯ್ಯೂಬ್ ಉಳ್ಳಾಲ ಮಾತನಾಡಿದರು.

ವೇದಿಕೆಯಲ್ಲಿ ಕತರ್ ಇಂಡಿಯನ್ ಸೋಷಿಯಲ್ ಫೋರಂ ದಫ್ನಾ ಅಧ್ಯಕ್ಷ ಖಲಂದರ್ ಜಲ್ಸೂರ್,‌‌ ಪ್ರಧಾನ ಕಾರ್ಯದರ್ಶಿಗಳಾದ ಸುಲೈಮಾನ್ ಕೊಡ್ಲಿಪೇಟೆ, QISF ದೋಹಾ ಅಧ್ಯಕ್ಷ ಅನ್ವರ್ ಅಂಗರಗುಂಡಿ,‌‌ ಪ್ರಧಾನ ಕಾರ್ಯದರ್ಶಿಗಳಾದ‌ ಅತೀಖ್ ಮಡಿಕೇರಿ, QISF ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕಾರ್ನಾಡ್ ಉಪಸ್ಥಿತರಿದ್ದರು.

QISF ದೋಹ ಪ್ರಧಾನ ಕಾರ್ಯದರ್ಶಿ ಅತೀಖ್‌ ಮಡಿಕೇರಿ ವಂದಿಸಿದರು. ಉಮರ್ ಸಲಾತ್ತೊರ್  ದೇಶಭಕ್ತಿ ಗೀತೆ ಹಾಡಿದರು. ಶಾಕಿರ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News