ಅಫ್ಘಾನ್ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಅಮೆರಿಕ ವಿಮಾನದಿಂದ ಬಿದ್ದು ಮೃತ್ಯು: ವರದಿ
ಕಾಬೂಲ್: ಅಫ್ಘಾನ್ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಝಾಕಿ ಅನ್ವರಿ ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ವಿಮಾನದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸುದ್ದಿ ಸಂಸ್ಥೆ Ariana ಗುರುವಾರ ತಿಳಿಸಿದೆ.
ತಾಲಿಬಾನ್ ಬಂಡುಕೋರರು ರವಿವಾರ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಹೊರಟಿದ್ದ ನಾಗರಿಕರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ನೆರೆದಿದ್ದರು. ಅನೇಕರು ಚಲಿಸುವ ವಿಮಾನವನ್ನು ಹತ್ತಲು ಪ್ರಯತ್ನಿಸಿದ್ದರು.
ಝಾಕಿ ಅನ್ವರಿ ಅವರು ಯುಎಸ್‌ಎಎಫ್ ಬೋಯಿಂಗ್ ಸಿ -17 ನಿಂದ ಕೆಳಗೆ ಬಿದ್ದಿದ್ದು, ಫುಟ್ಬಾಲ್ ಆಟಗಾರನ ಸಾವನ್ನು ಜನರಲ್ ಡೈರೆಕ್ಟರೇಟ್ ಫಾರ್ ಸ್ಪೋರ್ಟ್‌ನಿಂದ ದೃಢಪಡಿಸಿದೆ ಎಂದು Ariana ವರದಿ ಮಾಡಿದೆ.
ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ಮರುದಿನವೇ ಹಮೀದ್ ಕರ್ಝೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಾವಿರಾರು ಅಫ್ಘಾನಿಸ್ತಾನದ ಪ್ರಜೆಗಳಲ್ಲಿ ಅನ್ವಾರಿಯೂ ಒಬ್ಬರಾಗಿದ್ದರು. ಅವರು ಕಾಬೂಲ್‌ನಿಂದ ಹೊರಡಲಿರುವ ಸಿ -17 ವಿಮಾನವನ್ನು ಹತ್ತಿದ್ದರು ಎಂದು ವರದಿಯಾಗಿದೆ.
ರನ್‌ವೇಯಿಂದ ಹೊರಟ ಅಮೆರಿಕದ ವಾಯುಪಡೆಯ ವಿಮಾನದ ಬಳಿ ನೂರಾರು ಅಫ್ಘಾನಿಸ್ತಾನಗಳು ಕಿಕ್ಕಿರಿದು ತುಂಬಿದ್ದರು. ಕೆಲವರು ವಿಮಾನದ ಚಕ್ರಗಳಿಗೆ ಜೋತು ಬಿದ್ದರೆ ಇನ್ನು ಕೆಲವರು ರೆಕ್ಕೆಗಳ ಮೇಲೆ ಕುಳಿತುಕೊಂಡಿದ್ದರು.