ಸೌದಿ ಅರೇಬಿಯಾ: ಪವಿತ್ರ ಮಸೀದಿಗಳ ಪ್ರಾಂಗಣಗಳಲ್ಲಿ 25 ಹೊಸ ರಸ್ತೆ ನಿರ್ಮಾಣ
ರಿಯಾದ್, ಆ.20: ಮಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ರೂಪಿಸಲಾದ ಯೋಜನೆಯಂತೆ ಮಸೀದಿಯ ಪ್ರಾಂಗಣದಲ್ಲಿ 25 ಹೊಸ ರಸ್ತೆಗಳನ್ನು ನಿರ್ಮಿಸಲಾಗಿದ್ದು ಇದರಲ್ಲಿ 4 ರಸ್ತೆಗಳು ಅಂಗವಿಕಲತೆ ಉಳ್ಳವರಿಗೆ ಹಾಗೂ ಹಿರಿಯರಿಗೆ ಮೀಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಯಾತ್ರಿಗಳ ಆಗಮನಕ್ಕೆ 17 ಮಾರ್ಗಗಳನ್ನು ಮೀಸಲಿರಿಸಿದ್ದು, ನಿಯೋಜಿತ ಸ್ಥಳಗಳಲ್ಲಿ 100ಕ್ಕೂ ಅಧಿಕ ಪಹರೆಗಾರರನ್ನು ನೇಮಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ.
ವ್ಯಾಪಕ ಅಧ್ಯಯನ ಮತ್ತು ತಂತ್ರಜ್ಞಾನದ ಪ್ರಯೋಜನ ಪಡೆದು 2 ಪವಿತ್ರ ಮಸೀದಿಗಳಿಗೆ ಯಾತ್ರಿಗಳ ಸುಗಮ ಮತ್ತು ವ್ಯವಸ್ಥಿತ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತವಾದ ವ್ಯವಸ್ಥೆ ನಿರ್ಮಿಸಲಾಗಿದೆ. ಪ್ರತೀ ವರ್ಷ ಹಜ್ ಮತ್ತು ಉಮ್ರಾ ಯಾತ್ರೆಯನ್ನು ಅತ್ಯಂತ ಸಮಪರ್ಕವಾಗಿ ನಿರ್ವಹಿಸುವ ಮೂಲಕ ಸೌದಿ ಅರೇಬಿಯಾ ಸಾರಿಗೆ, ಭದ್ರತೆ ಮತ್ತು ಜನಗಂಗುಳಿ ನಿರ್ವಹಣೆಯ ಕಾರ್ಯಕ್ಕೆ ಜಾಗತಿಕ ಮನ್ನಣೆ ಪಡೆದಿದೆ ಎಂದು ಮಸೀದಿಯ ಜನಗಂಗುಳಿ ನಿರ್ವಹಣೆ ವಿಭಾಗದ ಸಹಾಯಕ ಅಧೀನ ಕಾರ್ಯದರ್ಶಿ ನಿಸಾರ್ ಅಲ್ಲಾಇದೀನ್ ಹೇಳಿದ್ದಾರೆ.