ಯುಎಇಯಲ್ಲಿ ಲಘು ಭೂಕಂಪ: ಹವಾಮಾನ ಇಲಾಖೆ

Update: 2021-09-01 17:08 GMT

ಅಬುಧಾಬಿ, ಸೆ.1: ಬುಧವಾರ ಯುಎಇಯಲ್ಲಿ ಲಘು ಭೂಕಂಪವಾಗಿದೆ ಎಂದು ರಾಷ್ಟ್ರೀಯ ಹವಾಮಾನ ಶಾಸ್ತ್ರ ಇಲಾಖೆ ಹೇಳಿದೆ.

 ಡಿಬ್ಬಾ ಅಲ್ ಫ್ಯುಜೈರದಲ್ಲಿ ಮಧ್ಯಾಹ್ನ 2:47ಕ್ಕೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆಯನ್ನು ದಾಖಲಿಸಿದೆ. ಎರಡು ವಾರದಲ್ಲಿ ಸಂಭವಿಸಿರುವ 2ನೇ ಲಘು ಭೂಕಂಪ ಇದಾಗಿದೆ. ಆಗಸ್ಟ್ 16ರಂದು ಮಸಾಫಿಯಲ್ಲಿ 2.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಕಳೆದ 10 ವರ್ಷದಿಂದ ಯುಎಇಯಲ್ಲಿ ಲಭು ಭೂಕಂಪ ಆಗಾಗ ಸಂಭವಿಸುತ್ತಿದ್ದು ಇದರಿಂದ ಹೆಚ್ಚಿನ ನಾಶನಷ್ಟ ಆಗದ ಕಾರಣ ಯಾರೂ ಆತಂಕ ಹೊಂದಿಲ್ಲ. ಭೂಮಿಯ ಹೊರಪದರದಲ್ಲಿ ಬಿರುಕು ಉಂಟಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆಗುವ ಚಲನೆ ಇದಕ್ಕೆ ಕಾರಣ ಎಂದು ಭೂಕಂಪಶಾಸ್ತ್ರ ಇಲಾಖೆಯ ನಿರ್ದೇಶಕ ಖಾಮಿಸ್ ಎಲ್ಶಾಮ್ಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News