ಯುಎಇ: ಹಡಗಿನಲ್ಲಿ ಬೆಂಕಿ ಅನಾಹುತ

Update: 2021-09-01 17:08 GMT

ಅಬುಧಾಬಿ, ಸೆ.1: ರಾಸ್ ಅಲ್ ಖೈಮಾದ ಅಲ್ಜಝೀರ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿ ಮಂಗಳವಾರ ಕಾಣಿಸಿಕೊಂಡಿದ್ದ ಬೆಂಕಿಯನ್ನು 4 ಗಂಟೆಗಳ ಕಾರ್ಯಾಚರಣೆಯ ಬಳಿಕ ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಮಂಗಳವಾರ ಮಧ್ಯಾಹ್ನ ಹಡಗಿನ ನಿರ್ವಹಣೆ ಕಾರ್ಯ ನಡೆಯುತ್ತಿದ್ದ ಸಂದರ್ಭ ಕ್ಯಾಬಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ 4 ಅಗ್ನಿಶಾಮಕ ತಂಡಗಳು ರಾತ್ರಿಯ ವೇಳೆ ಬೆಂಕಿಯನ್ನು ನಿಯಂತ್ರಿಸಲು ಸಫಲವಾಗಿದ್ದಾರೆ .ಯಾರಿಗೂ ಗಾಯವಾದ ಬಗ್ಗೆ ವರದಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News