ಅಫ್ಘಾನ್‌ಗೆ ವೈದ್ಯಕೀಯ ಮತ್ತು ಆಹಾರ ನೆರವು ರವಾನಿಸಿದ ಯುಎಇ
Update: 2021-09-03 17:25 GMT
ಅಬುಧಾಬಿ, ಸೆ.3: ತುರ್ತು ವೈದ್ಯಕೀಯ ಮತ್ತು ಆಹಾರ ನೆರವನ್ನು ಅಫ್ಘಾನ್‌ಗೆ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಯುಎಇಯ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅಫ್ಘಾನ್‌ನ ನಮ್ಮ ಸಹೋದರರಿಗೆ ಈಗಿನ ಪರಿಸ್ಥಿತಿಯಲ್ಲಿ ಸಂಪೂರ್ಣ ಬೆಂಬಲ ಒದಗಿಸುವ ಮಾನವೀಯ ಉಪಕ್ರಮದ ಚೌಕಟ್ಟಿನೊಳಗೆ ಈ ನೆರವನ್ನು ಒದಗಿಸಲಾಗಿದೆ . ಅಫ್ಘಾನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಳಿಕ ಯುಎಇ ರವಾನಿಸಿದ ಮೊದಲ ನೆರವು ಇದಾಗಿದೆ ಎಂದು ‘ವ್ಯಾಮ್’ ಸುದ್ಧಿಸಂಸ್ಥೆ ಹೇಳಿದೆ. ಅಫ್ಘಾನ್‌ನಲ್ಲಿ ಈ ಹಿಂದೆ 1996ರಿಂದ 2001ರವರೆಗೆ ಇದ್ದ ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡಿದ್ದ 3 ದೇಶಗಳಲ್ಲಿ ಯುಎಇ ಒಂದಾಗಿದೆ..