3,500 ಹುದ್ದೆಗಳಿಗೆ ನೇಮಕಾತಿ ಅಭಿಯಾನಕ್ಕೆ ಎಮಿರೇಟ್ಸ್ ಏರ್ಲೈನ್ಸ್ ಚಾಲನೆ
Update: 2021-09-17 17:35 GMT
ದುಬೈ, ಸೆ.17: 3000 ಕ್ಯಾಬಿನ್ ಸಿಬಂದಿಗಳು ಹಾಗೂ 500 ವಿಮಾನ ನಿಲ್ದಾಣ ಸೇವಾ ಸಿಬಂದಿಗಳ ಜಾಗತಿಕ ಮಟ್ಟದ ನೇಮಕಾತಿ ಅಭಿಯಾನಕ್ಕೆ ದುಬೈ ಮೂಲದ ಎಮಿರೇಟ್ಸ್ ಏರ್ಲೈನ್ಸ್ ಸಂಸ್ಥೆ ಚಾಲನೆ ನೀಡಿದೆ ಎಂದು ವರದಿಯಾಗಿದೆ.
ದುಬೈಯಲ್ಲಿರುವ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು www.emiratesgroupcareers.com ನಲ್ಲಿ ಹೆಚ್ಚಿನ ವಿವರ ಪಡೆದು ಅರ್ಜಿ ಸಲ್ಲಿಸಬಹುದು ಎಂದು ವರದಿ ತಿಳಿಸಿದೆ.