ಇನ್ನು ಮುಂದೆ ಅಬುಧಾಬಿ ಪ್ರವೇಶಕ್ಕೆ ಕೋವಿಡ್ ಟೆಸ್ಟ್ ಅವಶ್ಯಕತೆಯಿಲ್ಲ
ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ನ ಇತರ ಭಾಗಗಳ ಜನರು ಅಬುಧಾಬಿ ಪ್ರವೇಶಿಸಬೇಕಾದರೆ ಕೋವಿಡ್ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರ ಸಲ್ಲಿಸುವುದು ಅಗತ್ಯವಾಗಿತ್ತು. ಆದರೆ ಸೆಪ್ಟೆಂಬರ್ ೧೯ ಭಾನುವಾರದಿಂದ ಜಾರಿಗೆ ಬರುವಂತೆ ಅಬುಧಾಬಿಗೆ ಭೇಟಿ ನೀಡುವವರು ಕೋವಿಡ್ ನೆಗೆಟಿವ್ ಫಲಿತಾಂಶ ತೋರಿಸುವ ಅವಶ್ಯಕತೆಯಿಲ್ಲ ಎಂದು Khaleejtimes ವರದಿ ಮಾಡಿದೆ.
ಅಬುಧಾಬಿಯ ಕೋವಿಡ್-19ಸಾಂಕ್ರಾಮಿಕ ತುರ್ತುಸ್ಥಿತಿ, ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಸಮಿತಿಯು ಯುಎಇಯ ಒಳಗಿನಿಂದ ಅಬುಧಾನಿಗೆ ಪ್ರವೇಶಿಸುವ ನಿಯಮಗಳನ್ನು ನವೀಕರಿಸಿದೆ ಮತ್ತು ಕೋವಿಡ್ ಪರೀಕ್ಷೆ ನಡೆಸಿಯೇ ಅಬುದಾಬಿಗೆ ಆಗಮಿಸಬೇಕು ಎಂಬ ಕಾನೂನು ರದ್ದತಿಗೆ ಅನುಮೋದನೆ ನೀಡಿದೆ ಎಂದು ವರದಿ ಉಲ್ಲೇಖಿಸಿದೆ.
ಒಟ್ಟು ಪರೀಕ್ಷೆಗಳಲ್ಲಿ ಶೇ.0.2ರಷ್ಟು ಕೋವಿಡ್ ಸೋಂಕು ಅಬುಧಾಬಿಯಲ್ಲಿ ಕಡಿಮೆಯಾಗಿರುವ ಕಾರಣ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಗ್ರೀನ್ ಪಾಸ್ ವ್ಯಸ್ಥೆಯನ್ನು ಸಕ್ರಿಯಗೊಳಿಸಿದ ಬಳಿಕ ಈ ನಿರ್ಧಾರದ ಕುರಿತು ಘೋಷಣೆ ಮಾಡಲಾಗಿದೆ.