100 ಕೋಟಿ ವ್ಯಾಕ್ಸಿನ್ ಡೋಸ್ ಸಾಧನೆ ಭಾರತದ ಸಾಮರ್ಥ್ಯದ ಪ್ರತಿಬಿಂಬ: ಪ್ರಧಾನಿ ಮೋದಿ

Update: 2021-10-22 04:56 GMT

ಹೊಸದಿಲ್ಲಿ:  ನಿನ್ನೆ ದೇಶಾದ್ಯಂತ  100 ಕೋಟಿ ಕೋವಿಡ್-19 ಲಸಿಕೆ ಡೋಸ್ ಮೈಲುಗಲ್ಲು ತಲುಪಲಾಗಿದೆ.  100 ಕೋಟಿ ಲಸಿಕೆ ನೀಡಿಕೆ ಕೇವಲ ಸಂಖ್ಯೆಯಲ್ಲ. ಇದು ಈ ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಭಾರತ ಕೊರೋನ ವಿರುದ್ಧ ಯಶಸ್ವಿಯಾಗಿ ಹೋರಾಡಿದೆ.  ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು. ಪ್ರತಿಯೊಬ್ಬ ವ್ಯಕ್ತಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಶುಕ್ರವಾರ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರತಿಯೊಬ್ಬರೂ ಭಾರತವನ್ನು ಇತರ ದೇಶಗಳಿಗೆ ಹೋಲಿಸುತ್ತಿದ್ದಾರೆ.  ಆದರೆ ಭಾರತದ ಆರಂಭದ ಹಂತವು ವಿಭಿನ್ನವಾಗಿತ್ತು ಎಂಬುದನ್ನು ನೆನಪಿಡಿ. ಇತರ ದೇಶಗಳು ಯಾವಾಗಲೂ ವೈದ್ಯಕೀಯ ಮತ್ತು ಲಸಿಕೆಗಳಲ್ಲಿ ದೀರ್ಘಕಾಲ ಭಾಗವಹಿಸುತ್ತಿವೆ ಹಾಗೂ  ಭಾರತವು ಅಗತ್ಯವಾದದ್ದನ್ನು ಮಾಡಲು ಸಾಧ್ಯವೇ ಎಂದು ಎಲ್ಲರೂ ಪ್ರಶ್ನಿಸಿದರು. 100 ಕೋಟಿ ಲಸಿಕೆ ಡೋಸ್ ಗಳು ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿದೆ ಎಂದರು.

ಭಾರತ ಲಸಿಕೆಗಾಗಿ ಬೇರೆ ದೇಶವನ್ನು ಅವಲಂಬಿಸಿತ್ತು. ಹೀಗಾಗಿ ಕೊರೋನ ವಿರುದ್ಧ ಹೊರಾಟದಲ್ಲಿ ಹಲವು ಪ್ರಶ್ನೆ ಎದ್ದಿತ್ತು.  130 ಕೋಟಿ ಜನರಿಗ ಲಸಿಕೆ ನೀಡುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ.  ಇಡೀ ವಿಶ್ವ ಭಾರತದ ಸಾಧನೆಯನ್ನು ನೋಡುತ್ತಿದೆ. ನಮ್ಮ ದೇಶ ಕರ್ತ್ಯವವನ್ನು ಪಾಲಿಸಿದೆ. ಕಠಿಣ ಗುರಿ ಇಟ್ಟುಕೊಂಡು ಸಾದಿಸುವುದು ಭಾರತಕ್ಕೆ ಗೊತ್ತಿದೆ.ಲಸಿಕೆ ನೀಡಿಕೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕೊರೋನ ಲಸಿಕೆ ಅಭಿಯಾನದಲ್ಲಿ ಭಾರತ ಏಕತೆ ಕಂಡಿದೆ. ಕಡಿಮೆ ಸಮಯದಲ್ಲಿ 100 ಕೋಟಿ ವ್ಯಾಕ್ಸಿನ್ ಡೋಸ್ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News