ಪುತ್ರಿ ಸೌಂದರ್ಯಾರ ‘ಹೂಟೆ’ಆ್ಯಪ್‌ಗೆ ಚಾಲನೆ ನೀಡಿದ ನಟ ರಜನಿಕಾಂತ್

Update: 2021-10-25 16:27 GMT

ಚೆನ್ನೈ,ಅ.25: ದಿಗ್ಗಜ ನಟ ರಜನಿಕಾಂತ್ ಅವರು ಸೋಮವಾರ ತನ್ನ ಪುತ್ರಿ ಸೌಂದರ್ಯಾ ವಿಶಾಖನ್ ಅವರ ಸೋಷಿಯಲ್ ಮೀಡಿಯಾ ಆ್ಯಪ್ ‘ಹೂಟೆ ’ಗೆ ಚಾಲನೆ ನೀಡಿದರು. ಸೌಂದರ್ಯಾ ಆಮ್ಟೆಕ್ಸ್ ಸಿಇಒ ಸನ್ನಿ ಪೋಕಲ ಅವರೊಂದಿಗೆ ಸಹಭಾಗಿತ್ವದಲ್ಲಿ ಈ ಧ್ವನಿ ಆಧಾರಿತ ಆ್ಯಪ್‌ನ್ನು ಅಭಿವೃದ್ಧಿಗೊಳಿಸಿದ್ದಾರೆ.

60 ಸೆಕೆಂಡ್‌ಗಳ ಲೈವ್ ಧ್ವನಿ ಮುದ್ರಣಕ್ಕೆ ಅಥವಾ ಮುದ್ರಿತ ಧ್ವನಿಯ ಅಪ್‌ಲೋಡ್‌ಗೆ ನೂತನ ವೇದಿಕೆಯು ಅವಕಾಶವನ್ನು ಒದಗಿಸಲಿದೆ.

ಪ್ರಥಮವಾಗಿ ನನ್ನ ಧ್ವನಿಯಲ್ಲಿ ಹೂಟೆ ಆ್ಯಪ್‌ಗೆ ಚಾಲನೆ ನೀಡಿರುವುದು ನನಗೆ ಖುಷಿ ನೀಡಿದೆ. ವಿನೂತನ,ಉಪಯೋಗಿ ಆ್ಯಪ್ ಆಗಿರುವ ಇದು ಇಂತಹ ಮೊದಲ ಆ್ಯಪ್ ಆಗಿದೆ . ಜನರು ತಮ್ಮ ಆಯ್ಕೆಯ ಯಾವುದೇ ಭಾಷೆಯಲ್ಲಿ ಬರೆಯುತ್ತಿರುವಂತೆ ಈಗ ತಮ್ಮ ಚಿಂತನೆಗಳು,ಹಾರೈಕೆಗಳು ಮತ್ತು ಪರಿಕಲ್ಪನೆಗಳನ್ನು ತಮ್ಮ ಧ್ವನಿಯ ಮೂಲಕ ವ್ಯಕ್ತಪಡಿಸಬಹುದು ’ಎಂದು ರಜನಿಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೌಂದರ್ಯಾ,ಧ್ವನಿಯು ಸಾಮಾಜಿಕ ಮಾಧ್ಯಮದ ಭವಿಷ್ಯವಾಗಿದೆ,ಈ ಬಗ್ಗೆ ತನಗೆ ದೃಢವಾದ ನಂಬಿಕೆಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News