ಹಿರಿಯ ನಟ ಯೂಸುಫ್ ಹುಸೇನ್ ನಿಧನ
Update: 2021-10-30 05:38 GMT
ಮುಂಬೈ: "ಧೂಮ್ 2", "ರಯೀಸ್" ಹಾಗೂ "ರೋಡ್ ಟು ಸಂಗಮ್" ನಂತಹ ಚಲನಚಿತ್ರಗಳಲ್ಲಿ ನಟನೆ ಮೂಲಕ ಹೆಸರುವಾಸಿಯಾದ ಹಿರಿಯ ನಟ ಯೂಸುಫ್ ಹುಸೇನ್ ಅವರು ಕೋವಿಡ್-19 ನಿಂದ ಶನಿವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ನಟ ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಹುಸೇನ್ ಅವರ ಅಳಿಯ, ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಪಿಟಿಐಗೆ ತಿಳಿಸಿದ್ದಾರೆ.
ಹನ್ಸಲ್ ಮೆಹ್ತಾ ಅವರು ಟ್ವಿಟರ್ ಮೂಲಕ ಹುಸೇನ್ ಅವರ ನಿಧನದ ಕುರಿತು ಮಾಹಿತಿ ನೀಡಿದ್ದಾರೆ.
ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ-ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಹುಸೇನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.