ತ್ರಿಪುರಾ ಹಿಂಸಾಚಾರ: ರಾಜ್ಯ ಸರಕಾರದಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
Update: 2021-11-03 13:18 GMT
ಹೊಸದಿಲ್ಲಿ:ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ ಎಚ್ ಆರ್ ಸಿ) ತ್ರಿಪುರಾ ರಾಜ್ಯದಲ್ಲಿನ ಇತ್ತೀಚಿನ ಕೋಮು ಹಿಂಸಾಚಾರದ ಕುರಿತು ವಿವರವಾದ ಕ್ರಮ ಕೈಗೊಂಡ ವರದಿಯನ್ನು ತ್ರಿಪುರಾ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಹಾಗೂ ತ್ರಿಪುರಾ ಕಾರ್ಯದರ್ಶಿಯಿಂದ ಕೇಳಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ರಾಷ್ಟ್ರೀಯ ವಕ್ತಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.
ಆಯೋಗವು ದೂರನ್ನು ಪರಿಗಣಿಸಿದೆ. ದೂರಿನ ಪ್ರತಿಯನ್ನು ತ್ರಿಪುರಾದ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಿ, ಕ್ರಮಕೈಗೊಂಡಿರುವ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ತನ್ನ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ ಎಂದು ಎನ್ ಎಚ್ ಆರ್ ಸಿ ಆದೇಶದಲ್ಲಿ ತಿಳಿಸಿದೆ.