ದಿಲ್ಲಿ ಗಲಭೆ: ಯುವಕನ ಹತ್ಯೆ ಪ್ರಕರಣ, ನಾಲ್ವರ ವಿರುದ್ಧ ದೋಷಾರೋಪ

Update: 2021-11-12 17:55 GMT

ಹೊಸದಿಲ್ಲಿ,ನ.11: ಕಳೆದ ವರ್ಷ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಯುವಕನೊಬ್ಬನನ್ನು ಹತ್ಯೆಗೈದ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಕೊಲೆ,ದೊಂಬಿ ಹಾಗೂ ಕ್ರಿಮಿನಲ್ ಸಂಚಿನ ಆರೋಪವನ್ನು ಹೊರಿಸಲಾಗಿದೆ.

2020ರ ಫೆಬ್ರವರಿ 25ರಂದು ಈಶಾನ್ಯ ದಿಲ್ಲಿಯ ಅಂಬೇಡ್ಕರ್ ಕಾಲೇಜ್ ಸಮೀಪ ದೀಪಕ್ ಎಂಬಾತನನ್ನು ಅನ್ವರ್ ಹುಸೇನ್, ಕಾಸೀಂ ಹಾಗೂ ಖಾಲೀದ್ ಅನ್ಸಾರಿ ಅವರು ಥಳಿಸಿ ಹತ್ಯೆಗೈದಿದ್ದಾರಂದು ಆರೋಪಿಸಲಾಗಿದೆ. ಆತ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷಾ ವರದಿ ತಿಳಿಸಿತ್ತು.
ಆರೋಪಿಗಳ ವಿರುದ್ಧ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಭಾರತೀಯ ದಂಡಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿ ದೋಷಾರೋಪ ದಾಖಲಿಸಿಕೊಂಡರು. ಆರೋಪಿಗಳು ಗಲಭೆ ನಡೆಸುವ ಉದ್ದೇಶದಿಂದಲೇ ಅಕ್ರಮವಾಗಿ ಗುಂಪುಗೂಡಿದ್ದಾರೆ ಮತ್ತು ದೀಪಕ್ನ ಕೊಲೆಯಂತಹ ಇತರ ಅಪರಾಧಗಳನ್ನು ಯೋಜಿತವಾಗಿ ಎಸಗಿದ್ದಾರೆಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಸುನೀಲ್ ಕುಮಾರ್ ಎಂವರು ಇಡೀ ಘಟನೆಯ ಮುಖ್ಯ ಸಾಕ್ಷಿಯಾಗಿದ್ದು ಆರೋಪಿಗಳನ್ನು ಒಳಗೊಂಡ ಶಸ್ತ್ರಸಜ್ಜಿತ ಗುಂಪು ದೀಪಕ್ನನ್ನು ನಿರ್ದಯವಾಗಿ ಹೇಗೆ ಹತ್ಯೆಗೈಯಿತೆಂಬ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆಂದು ನ್ಯಾಯಾಧೀಶರು ತಿಳಿಸಿದರು.
ಘಟನೆ ನಡೆದ ಸಂದರ್ಭ ತಾನು ಚರಂಡಿಯೊಂದರ ಹಿಂದೆ ಇರುವ ಗೋಡೆಯಲ್ಲಿ ಅವಿತುಕೊಂಡಿದ್ದೆ ಮತ್ತು ಗೋಡೆಯಲ್ಲಿರುವ ಬಿರುಕಿನ ಮೂಲಕ ಇಡೀ ಹತ್ಯೆಯ ಘಟನೆಯನ್ನು ವೀಕ್ಷಿಸಿದ್ದಾಗಿ ಪ್ರತ್ಯಕ್ಷದರ್ಶಿ ಸುನೀಲ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ನಾಲ್ವರು ಆರೋಪಿಗಳನ್ನು ಕೂಡಾ ಆತ ಅವರ ಹೆರು ಹಿಡಿದು ಗುರುತಿಸಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News