ಟಿ-20 ವಿಶ್ವಕಪ್‌ನ ಅತ್ಯಂತ ವೌಲಿಕ ತಂಡಕ್ಕೆ ಬಾಬರ್ ಆಝಮ್ ನಾಯಕ

Update: 2021-11-15 18:12 GMT

ದುಬೈ, ನ. 15: ಐಸಿಸಿ ಟಿ-20 ವಿಶ್ವಕಪ್‌ನ ಅತ್ಯಂತ ವೌಲಿಕ ತಂಡಕ್ಕೆ ಆರು ತಂಡಗಳ ಆಟಗಾರರು ಸೇರ್ಪಡೆಗೊಂಡಿದ್ದಾರೆ. ಆದರೆ ಭಾರತದ ಯಾವುದೇ ಆಟಗಾರ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿದ ಒಂದು ದಿನದ ಬಳಿಕ ಐಸಿಸಿ ಪಂದ್ಯಾವಳಿಯ ಅತ್ಯಂತ ವೌಲಿಕ ತಂಡವನ್ನು ಪ್ರಕಟಿಸಿದೆ. ಪ್ರಶಸ್ತಿ ವಿಜೇತ ಆಸ್ಟ್ರೇಲಿಯ, ರನ್ನರ್ಸ್ -ಅಪ್ ನ್ಯೂಝಿಲ್ಯಾಂಡ್, ಸೆಮಿಫೈನಲ್‌ಗಳಲ್ಲಿ ಆಡಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ಗಳ ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಗಳ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್‌ರನ್ನು ತಂಡದ ನಾಯಕನಾಗಿ ಹೆಸರಿಸಲಾಗಿದೆ. ಸರಣಿ ಶ್ರೇಷ್ಠ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಆಡುವ 11ರಲ್ಲಿ ಓರ್ವ ಆರಂಭಿಕನಾಗಿದ್ದಾರೆ.

ಇಂಗ್ಲೆಂಡ್ ಆರಂಭಿಕ ಜೋಸ್ ಬಟ್ಲರ್‌ರನ್ನು ವಿಕೆಟ್-ಕೀಪರ್ ಬ್ಯಾಟರ್ ಆಗಿ ಹೆಸರಿಸಲಾಗಿದೆ. ಅವರು ವಾರ್ನರ್ ಜೊತೆಗೆ ಇನಿಂಗ್ಸ್ ಆರಂಭಿಸುವರು. ಇಂಗ್ಲೆಂಡ್‌ನ ಮೊಯೀನ್ ಅಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಶ್ರೀಲಂಕಾದ ಚರಿತ್ ಅಸಲಂಕ ಮತ್ತು ದಕ್ಷಿಣ ಆಫ್ರಿಕದ ಏಡನ್ ಮರ್ಕ್ರಾಮ್ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕಗಳಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.

► ತಂಡ: ಡೇವಿಡ್ ವಾರ್ನರ್ (ಆಸ್ಟ್ರೇಲಿಯ), ಜೋಸ್ ಬಟ್ಲರ್ (ಇಂಗ್ಲೆಂಡ್-ವಿಕೆಟ್‌ಕೀಪರ್), ಬಾಬರ್ ಆಝಮ್ (ಪಾಕಿಸ್ತಾನ- ನಾಯಕ), ಚರಿತ್ ಅಸಲಂಕ (ಶ್ರೀಲಂಕಾ), ಏಡನ್ ಮರ್ಕ್ರಾಮ್ (ದಕ್ಷಿಣ ಆಫ್ರಿಕ), ಮೊಯೀನ್ ಅಲಿ (ಇಂಗ್ಲೆಂಡ್), ಹಸರಂಗ (ಶ್ರೀಲಂಕಾ), ಝಾಂಪ (ಆಸ್ಟ್ರೇಲಿಯ), ಜೋಶ್ ಹೇಝಲ್‌ವು್ (ಆಸ್ಟ್ರೇಲಿಯ), ಟ್ರೆಂಟ್ ಬೋಲ್ಟ್ (ನ್ಯೂಝಿಲ್ಯಾಂಡ್), ಆ್ಯನ್‌ರಿಕ್ ನೋರ್ಟ್‌ಯೆ (ದಕ್ಷಿಣ ಆಫ್ರಿಕ) ಮತ್ತು ಶಹೀನ್ ಅಫ್ರಿದಿ (ಪಾಕಿಸ್ತಾನ- 12ನೇ ಆಟಗಾರ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News