ಬೆದರಿಕೆ ಹಿನ್ನೆಲೆ: ನಟ ಸೂರ್ಯ ನಿವಾಸಕ್ಕೆ ಸಶಸ್ತ್ರ ಪೊಲೀಸರ ರಕ್ಷಣೆ
Update: 2021-11-17 12:13 GMT
ಚೆನ್ನೈ: ಅಮೆಝಾನ್ ಪ್ರೈಮ್ ವೀಡಿಯೋದಲ್ಲಿ ಜೈ ಭೀಮ್ ತಮಿಳು ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ನಟ ಸೂರ್ಯ ಅವರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ಚೆನ್ನೈನ ಟಿ ನಗರದಲ್ಲಿರುವ ನಟ ಸೂರ್ಯ ಅವರ ನಿವಾಸದಲ್ಲಿ ನಿಯೋಜಿಸಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ ನಟ ಪೊಲೀಸರಿಂದ ರಕ್ಷಣೆ ಕೋರಿರಲಿಲ್ಲ. ವಿಶೇಷವೆಂದರೆ, 'ಜೈ ಭೀಮ್' ವಿವಾದವು ಒಂದು ವಾರಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದೆ.
ಇದೇ ವೇಳೆ, ಪ್ರಮುಖ ಜಾತಿ ಆಧಾರಿತ ಗುಂಪು ಹಾಗೂ ಪಟ್ಟಾಲಿ ಮಕ್ಕಳ್ ಕಚ್ಚಿಯ ಮಾತೃಸಂಸ್ಥೆಯಾದ ವನ್ನಿಯಾರ್ ಸಂಗಮವು 'ಜೈ ಭೀಮ್' ನಿರ್ಮಾಪಕರಿಗೆ ಕಾನೂನು ನೋಟಿಸ್ ಜಾರಿಗೊಳಿಸಿದಾಗಿನಿಂದ' ಸೂರ್ಯ ಅವರನ್ನು ಬೆಂಬಲಿಸುವ ಮತ್ತು ಟೀಕಿಸುವ ಹ್ಯಾಶ್‌ಟ್ಯಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.