'ಕೇಂದ್ರ ತನ್ನ ತಪ್ಪು ಸರಿಪಡಿಸುವ ಬದಲು ಜನರ ಸಮಸ್ಯೆಗೆ ಇನ್ನೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರನ್ನು ದೂಷಿಸುತ್ತಿದೆ'

Update: 2022-02-17 09:22 GMT

ಹೊಸದಿಲ್ಲಿ: ಪಂಜಾಬ್ ಚುನಾವಣೆಗೆ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಪ್ರತಿಯೊಂದು ಸಮಸ್ಯೆಗೂ  ಜವಾಹರಲಾಲ್ ನೆಹರೂ ಅವರನ್ನು ದೂಷಿಸುತ್ತಿದ್ದಾರೆ.ಪ್ರಧಾನಿ ಹುದ್ದೆಗೆ ವಿಶೇಷ ಸ್ಥಾನಮಾನವಿದೆ ಎಂದರು.

ಕಾಂಗ್ರೆಸ್ ಎಂದಿಗೂ ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ ಅಥವಾ ಸತ್ಯವನ್ನು ಮರೆಮಾಚಲಿಲ್ಲ ಎಂದು 89 ವರ್ಷದ ಮನಮೋಹನ್ ಸಿಂಗ್ ಹೇಳಿದ್ದಾರೆ.

“ಒಂದೆಡೆ ಜನರು ಹಣದುಬ್ಬರ ಹಾಗೂ  ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತೊಂದೆಡೆ, ಕಳೆದ ಏಳೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಈಗಿನ ಸರಕಾರವು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸುವ ಬದಲು ಜನರ ಸಮಸ್ಯೆಗಳಿಗೆ ಇನ್ನೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಿದೆ’’ ಎಂದು ಕಾಂಗ್ರೆಸ್ ಪ್ರಸಾರ ಮಾಡಿರುವ ವೀಡಿಯೊ ಸಂದೇಶದಲ್ಲಿ ಡಾ. ಸಿಂಗ್ ಹೇಳಿದ್ದಾರೆ.

"ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿಯವರು ಇತಿಹಾಸವನ್ನು ದೂಷಿಸುವ ಬದಲು ಘನತೆಯನ್ನು ಕಾಯ್ದುಕೊಳ್ಳಬೇಕು, ನಾನು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾಗ ನನ್ನ ಕೆಲಸದ ಮೂಲಕ ಮಾತನಾಡಿದ್ದೇನೆ. ಪ್ರಪಂಚದ ಮುಂದೆ ದೇಶವು ಪ್ರತಿಷ್ಠೆಯನ್ನು ಕಳೆದುಕೊಳ್ಳಲು ನಾನು ಎಂದಿಗೂ ಬಿಡಲಿಲ್ಲ. ನಾನು ಯಾವತ್ತೂ ಭಾರತದ ಹೆಮ್ಮೆಗೆ ಧಕ್ಕೆ ತಂದಿಲ್ಲ'' ಎಂದು ಹೇಳಿದರು.

“ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿಯವರು ಇತಿಹಾಸವನ್ನು ದೂಷಿಸುವ ಬದಲು ಘನತೆಯನ್ನು ಕಾಯ್ದುಕೊಳ್ಳಬೇಕು. ನಾನು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾಗ ನನ್ನ ಕೆಲಸದ ಮೂಲಕ ಮಾತನಾಡಿದ್ದೇನೆ. ಪ್ರಪಂಚದ ಮುಂದೆ ದೇಶವು ಪ್ರತಿಷ್ಠೆಯನ್ನು ಕಳೆದುಕೊಳ್ಳಲು ನಾನು ಎಂದಿಗೂ ಬಿಡಲಿಲ್ಲ. ನಾನು ಯಾವತ್ತೂ ಭಾರತದ ಹೆಮ್ಮೆಗೆ ಧಕ್ಕೆ ತಂದಿಲ್ಲ. ನನ್ನ ವಿರುದ್ಧ ದುರ್ಬಲ, ಶಾಂತ ಹಾಗೂ  ಭ್ರಷ್ಟ ಎಂಬ ಸುಳ್ಳು ಆರೋಪದ ನಂತರ ಬಿಜೆಪಿ ಹಾಗೂ ಅದರ ಬಿ ಮತ್ತು ಸಿ ಟೀಮ್ ದೇಶದ ಮುಂದೆ ಬಹಿರಂಗಗೊಳ್ಳುತ್ತಿದೆ ಎಂಬ ತೃಪ್ತಿ ನನಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News