ಪಾಕ್‌ ತಂಡದ ನಾಯಕಿ, ಮಗುವಿನೊಂದಿಗೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ್ತಿಯರ ಸೆಲ್ಫೀ: ವೀಡಿಯೊ ವೈರಲ್

Update: 2022-03-06 13:08 GMT

ಬೇ ಓವಲ್:‌ ಏಕದಿನ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ನಡೆಯುತ್ತಿದ್ದು, ಇಂದು ನಡೆದ ನಾಲ್ಕನೇ ಪಂದ್ಯಾಟದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಇದೀಗ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಬಿಸ್ಮಾ ಮಹ್ರೂಫ್‌ ರ ಪುಟ್ಟ ಮಗುವಿನೊಂದಿಗೆ ಭಾರತೀಯ ತಂಡದ ಸದಸ್ಯರು ಕಾಲಕಳೆಯುತ್ತಿರುವುದು ಹಾಗೂ ಸೆಲ್ಫೀ ಕ್ಲಿಕ್ಕಿಸುತ್ತಿರುವ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಐಸಿಸಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಫೋಟೊವನ್ನು ʼಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್‌ ಸ್ಫೂರ್ತಿಯ ಕುರಿತು ಮೊದಲ ಪಾಠವನ್ನು ಕಲಿಯುತ್ತಿರುವ ಪುಟ್ಟ ಫಾತಿಮಾ" ಎಂದು ಟ್ವೀಟ್‌ ಮಾಡಿದೆ. ಈ ನಡುವೆ ಪ್ರಮುಖ ಆಟಗಾರ್ತಿ ಏಕ್ತಾ ಬಿಶ್ತ್‌ ಪೆವಿಲಿಯನ್‌ ನಲ್ಲಿ ಮಗುವಿನೊಂದಿಗೆ ಆಟವಾಡುವುದು ಹಾಗೂ ಇನ್ನಿತರ ಆಟಗಾರ್ತಿಯರು ಮಗುವಿನೊಂದಿಗೆ ಸಮಯ ಕಳೆಯುತ್ತಿರುವ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News