ಎ.1ರಂದು ವಿದ್ಯಾರ್ಥಿಗಳೊಂದಿಗೆ ಪ್ರಧಾನಿಯ ‘ಪರೀಕ್ಷಾ ಪೆ ಚರ್ಚಾ’

Update: 2022-03-26 14:43 GMT

ಹೊಸದಿಲ್ಲಿ, ಮಾ. 26: ಪ್ರಧಾನಿ ನರೇಂದ್ರ ಮೋದಿಯವರು ಎ.1ರಂದು ವಿದ್ಯಾರ್ಥಿಗಳೊಂದಿಗೆ ‘ಪರೀಕ್ಷಾ ಪೆ ಚರ್ಚಾ ’ನಡೆಸಲಿದ್ದಾರೆ. ಶಿಕ್ಷಣ ಸಚಿವಾಲಯದ ಸಾಮಾಜಿಕ ಶಿಕ್ಷಣ ಇಲಾಖೆಯು ಪ್ರಧಾನಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸುವ ಈ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದಲೂ ಆಯೋಜಿಸುತ್ತಿದೆ.

‘ಪರೀಕ್ಷಾ ಪೆ ಚರ್ಚಾ’ದ ಮೊದಲ ಮೂರು ಆವೃತ್ತಿಗಳು ಟೌನ್‌ಹಾಲ್ ಸಂವಾದ ಮಾದರಿಯಲ್ಲಿ ನಡೆದಿದ್ದರೆ,ನಾಲ್ಕನೇ ಆವೃತ್ತಿಯು ಕಳೆದ ವರ್ಷದ ಎಪ್ರಿಲ್ 7ರಂದು ಆನ್‌ಲೈನ್‌ನಲ್ಲಿ ನಡೆದಿತ್ತು.

‘ಪರೀಕ್ಷಾ ಪೆ ಚರ್ಚಾ ಸಂವಾದಾತ್ಮಕವಾಗಿದ್ದು,ಹೃದಯಗಳನ್ನು ಹಗುರವಾಗಿಸಲಿದೆ. ಪರೀಕ್ಷೆಗಳು,ಅಧ್ಯಯನಗಳು,ಜೀವನದ ವಿವಿಧ ಅಂಶಗಳು ಮತ್ತು ಇನ್ನೂ ಹೆಚ್ಚಿನದರ ಬಗ್ಗೆ ಮಾತನಾಡಲು ನಮ್ಮೆಲ್ಲರಿಗೆ ಅವಕಾಶವೊದಗಿಸುತ್ತದೆ ’ಎಂದು ಮೋದಿ ಟ್ವೀಟಿಸಿದ್ದಾರೆ.

ಈ ವರ್ಷದ ‘ಪರೀಕ್ಷಾ ಪೆ ಚರ್ಚಾ ’ಕಾರ್ಯಕ್ರಮ ಎ.1ರಂದು ದಿಲ್ಲಿಯ ತಾಲಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ’ಒತ್ತಡಮುಕ್ತ ಪರೀಕ್ಷೆಗಳ ಬಗ್ಗೆ ಮತ್ತೊಮ್ಮೆ ಮಾತನಾಡೋಣ. ಈ ವರ್ಷದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಉತ್ಸಾಹಿ ಪರೀಕ್ಷಾ ಯೋಧರು,ಅವರ ಪೋಷಕರು ಮತ್ತು ಶಿಕ್ಷಕರನ್ನು ಆಹ್ವಾನಿಸುತ್ತಿದ್ದೇನೆ ’ ಎಂದು ಇನೊ್ನಂದು ಟ್ವೀಟ್‌ನಲ್ಲಿ ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News