ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

Update: 2022-03-27 03:01 GMT

ಹೊಸದಿಲ್ಲಿ: ಆರು ದಿನಗಳಲ್ಲಿ ಐದನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು, ರವಿವಾರ ಪೆಟ್ರೋಲ್ 50 ಪೈಸೆಯಷ್ಟು ಮತ್ತು ಡೀಸೆಲ್ 55 ಪೈಸೆಯಷ್ಟು ದುಬಾರಿಯಾಗಿದೆ.

ಇದರಿಂದಾಗಿ ಒಂದೇ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 3.70 ರೂಪಾಯಿ ಮತ್ತು 3.75 ರೂ. ಹೆಚ್ಚಿದಂತಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇದೀಗ ಲೀಟರ್ ಗೆ ರೂ. 99.11 ಆಗಿದ್ದು, ಡೀಸೆಲ್ ಬೆಲೆ ರೂ. 89.87ರಿಂದ ರೂ. 90.42ಗೆ ಹೆಚ್ಚಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಪ್ರಕಟಣೆ ಹೇಳಿದೆ.

ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆ ಆಯಾ ರಾಜ್ಯಗಳ ತೆರಿಗೆಗಳನ್ನು ಅವಲಂಬಿಸಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಇದೀಗ ರೂ. 111.88 ಆಗಿದ್ದು, ಡೀಸೆಲ್ ಬೆಲೆ ರೂ. 98.12 ಆಗಿದೆ. ಎರಡು ಇಂಧನಗಳ ಬೆಲೆ ಕ್ರಮವಾಗಿ 53 ಪೈಸೆ ಮತ್ತು 58 ಪೈಸೆಯಷ್ಟು ಹೆಚ್ಚಿದೆ. ಬೆಲೆ ಪರಿಷ್ಕರಣೆ ರೂ. 104.90 ಮತ್ತು ರೂ. 95.00 ಯಿಂದ ಆರಂಭವಾಗಿತ್ತು. ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ರೂ. 108.53 ಹಾಗೂ ಡೀಸೆಲ್ ದರ ರೂ. 93.57 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News