ಪತ್ರಕರ್ತೆ ರಾಣಾ ಅಯ್ಯೂಬ್‌ ರನ್ನು ವಿಮಾನ ನಿಲ್ದಾಣದಲ್ಲಿ ತಡೆದಿರಿಸಿದ ಅಧಿಕಾರಿಗಳು

Update: 2022-03-30 06:12 GMT

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಕಾರಣದಿಂದ ಈ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ಪತ್ರಕರ್ತೆ ರಾಣಾ ಅಯ್ಯೂಬ್‌ ರನ್ನು ಲಂಡನ್‌ ಗೆ ತೆರಳದಂತೆ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಅವರು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ಒಂದು ವಾರ ಮುಂಚೆಯೇ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ದರೂ ಅನಿರೀಕ್ಷಿತವಾಗಿ ಈ ಕ್ರಮ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಲಂಡನ್‌ ಗೆ ವಿಮಾನ ಏರುವ ಮುಂಚೆಯೇ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿರಿಸಲಾಗಿದೆ. ಕೋವಿಡ್-19 ಪರಿಹಾರಕ್ಕಾಗಿ ದೇಣಿಗೆ ಸಂಗ್ರಹಿಸುವಾಗ ರಾಣಾ ಅಯ್ಯೂಬ್ ಅವರು ವಿದೇಶಿ ಧನಸಹಾಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

"ಭಾರತೀಯ ಪ್ರಜಾಪ್ರಭುತ್ವದ ಕುರಿತು ಮುಖ್ಯ ಭಾಷಣ ಮಾಡಲು ಮತ್ತು ನಂತರದ ಅಂತರಾಷ್ಟ್ರೀಯ ಪತ್ರಿಕೋದ್ಯಮ ಉತ್ಸವಕ್ಕೆ ಪ್ರಯಾಣಿಸಲು ಮುಂದಾಗಿದ್ದ ನನ್ನನ್ನು ಮುಂಬೈ ಇಮಿಗ್ರೇಷನ್‌ನಲ್ಲಿ ಇಂದು ತಡೆಹಿಡಿಯಲಾಯಿತು. ನಾನು ಈ ಘೋಷಣೆಯನ್ನು ವಾರಗಳ ಹಿಂದೆಯೇ ಸಾರ್ವಜನಿಕವಾಗಿ ಪ್ರಕಟಿಸಿದ್ದೆ, ಆದರೆ ಇಡಿ (ಜಾರಿ ನಿರ್ದೇಶನಾಲಯ) ಸಮನ್ಸ್ ಬಹಳ ಅನಿರೀಕಿತವೆಂಬಂತೆ ಬಂದಿದೆ" ಎಂದು ಅವರು ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News