ಎ.4ರಿಂದ ಭೌತಿಕ ವಿಚಾರಣೆಯನ್ನು ಆರಂಭಿಸಲಿರುವ ಸುಪ್ರೀಂ ಕೋರ್ಟ್

Update: 2022-03-30 16:36 GMT
PHOTO PTI

ಹೊಸದಿಲ್ಲಿ,ಮಾ.30: ಸರ್ವೋಚ್ಚ ನ್ಯಾಯಾಲಯವು ಎ.4ರಿಂದ ಪ್ರಕರಣಗಳ ಭೌತಿಕ ವಿಚಾರಣೆಯನ್ನು ಆರಂಭಿಸಲಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಬುಧವಾರ ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ ದಿನದ ಕಲಾಪಗಳ ಆರಂಭಕ್ಕೆ ಮುನ್ನ ನ್ಯಾ.ರಮಣ ಈ ವಿಷಯವನ್ನು ಪ್ರಕಟಿಸಿದರು.

‘ವಕೀಲರು ಬಯಸಿದರೆ ನಾವು ಸೋಮವಾರ ಮತ್ತು ಶುಕ್ರವಾರ ವರ್ಚುವಲ್ ವಿಚಾರಣೆಗಾಗಿ ಲಿಂಕ್‌ಗಳನ್ನು ಒದಗಿಸುತ್ತೇವೆ ’ ಎಂದು ನ್ಯಾ.ರಮಣ ತಿಳಿಸಿದರು.ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News