"ತೀರಾ ನಿರಾಶಾದಾಯಕ": ರಷ್ಯಾ ಹಣಕಾಸು ವರ್ಗಾವಣೆ ವ್ಯವಸ್ಥೆಗೆ ಭಾರತ ಸೇರ್ಪಡೆ ಎಂಬ ವರದಿ ಬಗ್ಗೆ ಅಮೆರಿಕಾ ಪ್ರತಿಕ್ರಿಯೆ

Update: 2022-03-31 13:59 GMT

 ಹೊಸದಿಲ್ಲಿ : ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಬಹಳಷ್ಟು ರಿಯಾಯಿತಿ ದರದಲ್ಲಿ ರಷ್ಯಾದಿಂದ ಕಚ್ಛಾ ತೈಲ ಖರೀದಿಸಲು  ಆ ದೇಶದೊಂದಿಗೆ ಭಾರತವು ಪಾವತಿ ವ್ಯವಸ್ಥೆ ಕುರಿತಂತೆ ಕೆಲಸ ಮಾಡುತ್ತಿದೆ ಎಂಬ ವರದಿಗಳನ್ನು ಅಮೆರಿಕಾ "ಬಹಳಷ್ಟು ನಿರಾಶಾದಾಯಕ" ಎಂದು ವರ್ಣಿಸಿದೆಯಲ್ಲದೆ "ಭಾರತವು ಇತಿಹಾಸದ ಸರಿಯಾದ ಕಡೆಯಲ್ಲಿ ನಿಲ್ಲಬೇಕು" ಎಂದು ಹೇಳಿದೆ.

ತೈಲ ಮತ್ತು ಮಿಲಿಟರಿ ಉಪಕರಣ ಕುರಿತ ಹಣಕಾಸು ವ್ಯವಹಾರಗಳಿಗಾಗಿ ರಷ್ಯಾದ ಸೆಂಟ್ರಲ್ ಮೆಸೇಜಿಂಗ್ ವ್ಯವಸ್ಥೆ ಎಸ್‍ಪಿಎಫ್‍ಎಸ್ ಬಳಸಲು ಭಾರತ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ನಡುವೆ ಈ ಹೇಳಿಕೆ ಬಂದಿದೆ.

ಆಸ್ಟ್ರೇಲಿಯಾ ವಾಣಿಜ್ಯ ಸಚಿವ ಡಾನ್ ಟೆಹಾನ್ ಜತೆಗೆ ವಾಷಿಂಗ್ಟನ್‍ನಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ  ಗಿನಾ ರೈಮೊಂಡೊ ಮೇಲಿನಂತೆ ಹೇಳಿದ್ದಾರೆ.

"ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವಕ್ಕಾಗಿ ಉಕ್ರೇನ್ ಜನರ ಪರ ನಿಂತಿರುವ ಅಮೆರಿಕಾ, ಮತ್ತು ಡಜನುಗಟ್ಟಲೆ ಇತರ ದೇಶಗಳ ಜೊತೆಗೆ ಭಾರತ ನಿಲ್ಲಬೇಕೇ ಹೊರತು  ಅಧ್ಯಕ್ಷ ಪುಟಿನ್ ಅವರ ಯುದ್ಧಕ್ಕೆ ಹಣಕಾಸು  ಒದಗಿಸುವುದು ಮತ್ತು ಸಹಾಯ ಮಾಡುವುದಲ್ಲ" ಎಂದು ಗಿನಾ ರೈಮೊಂಡೊ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧದ ನಿರ್ಣಯಗಳಿಗೆ ಮತ ಹಾಕುವುದನ್ನು ತಪ್ಪಿಸಲು  ವಿವಿಧ ವಿಶ್ವ ಸಂಸ್ಥೆಯ ಸಭೆಗಳಲ್ಲಿ ಗೈರಾಗಿದೆ. ಅದೇ ಸಮಯ ಸಾರ್ವಭೌಮ ದೇಶಗಳ ಪ್ರಾದೇಶಿಕ  ಏಕತೆಯ ಯುಎನ್ ನಿಯಮಾವಳಿಯನ್ನು ತಾನು ಬೆಂಬಲಿಸುವುದಾಗಿ ಭಾರತ ಒತ್ತಿ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News