ದೇಶದಲ್ಲಿ ಮಾರ್ಚ್ ಉಷ್ಣಾಂಶ 122 ವರ್ಷಗಳಲ್ಲೇ ಅಧಿಕ : ಹವಾಮಾನ ಇಲಾಖೆ

Update: 2022-04-02 01:55 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಳೆದ ಮಾರ್ಚ್‍ನಲ್ಲಿ ದೇಶದಲ್ಲಿ ದಾಖಲಾದ ಸರಾಸರಿ ಉಷ್ಣಾಂಶ 1901ರಿಂದೀಚೆಗಿನ ಹವಾಮಾನ ಇತಿಹಾಸದಲ್ಲೇ ಅತ್ಯಧಿಕ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದೆ.

ದೇಶದಲ್ಲಿ 2010ರ ಮಾರ್ಚ್‍ನಲ್ಲಿ ದಾಖಲಾಗಿದ್ದ ಅತ್ಯಧಿಕ ಸರಾಸರಿ ಉಷ್ಣಾಂಶದ ದಾಖಲೆಯನ್ನು 2022 ಅಳಿಸಿ ಹಾಕಿದೆ. 2010ರ ಮಾರ್ಚ್‍ನದಲ್ಲಿ ದೇಶದಲ್ಲಿ ಸರಸರಿ 33.09 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ಬಾರಿ 33.1 ಡಿಗ್ರಿ ಸೆಲ್ಷಿಯಸ್ ಸರಾಸರಿ ಮಾಸಿಕ ಉಷ್ಣಾಂಶ ದಾಖಲಾಗಿದೆ. ಈ ಮೂಲಕ 2022 ಇದುವರೆಗಿನ ಎಲ್ಲ ತಾಪಮಾನ ದಾಖಲೆಗಳನ್ನು ಅಳಿಸಿ ಹಾಕಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.

2020ರಲ್ಲಿ ವಾಯುವ್ಯ ಭಾರತದಲ್ಲಿ ಮಾರ್ಚ್ ತಿಂಗಳ ಅತ್ಯಧಿಕ ತಾಪಮಾನ ದಾಖಲಾಗಿತ್ತು. ಕೇಂದ್ರ ಭಾರತಕ್ಕೆ ಇದು ಎರಡನೇ ಅತ್ಯಧಿಕ ತಾಪಮಾನದ ಮಾರ್ಚ್ ಆಗಿತ್ತು. ಈ ವರ್ಷ ಕೂಡಾ ಈ ಭಾಗಗಳಲ್ಲಿ ಬೇಸಿಗೆ ಆರಂಭದಲ್ಲೇ ನಿರಂತರ ಉಷ್ಣಗಾಳಿ ಪ್ರಕರಣಗಳು ವರದಿಯಾಗಿವೆ.

"ಜಾಗತಿಕವಾಗಿ ಕೂಡಾ ಎರಡು ದಶಕಗಳಲ್ಲಿ ಮಾರ್ಚ್ ತಿಂಗಳ ಅತ್ಯಧಿಕ ತಾಪಮಾನ ವರದಿಯಾಗಿದೆ. ಹವಾಮಾನ ಬದಲಾವಣೆಯು ಹವಾಮಾನ ತೀವ್ರತೆ ಮತ್ತು ಅವಧಿಯ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೂಡಾ ಇದು ಉಷ್ಣಗಾಳಿ ಆಗಿರಬಹುದು, ಬಿರುಗಾಳಿಯ ತೀವ್ರತೆ ಹಾಗೂ ಭಾರಿ ಮಳೆಯ ಮೂಲಕ ಪರಿಣಾಮ ಕಾಣಿಸುತ್ತಿದೆ" ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ವಿಜ್ಞಾನಿ ರಾಜೇಂದ್ರ ಜೇನಮನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News