9ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸಲು ಮುಂದಾದ ಹಿಮಾಚಲಪ್ರದೇಶ

Update: 2022-04-04 10:43 GMT
Govind singh takur

ಹೊಸದಿಲ್ಲಿ: ಈ ಶೈಕ್ಷಣಿಕ ಅವಧಿಯಿಂದ 9, 10, 11 ಹಾಗೂ  12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಬೋಧಿಸಲಾಗುವುದು ಎಂದು ಹಿಮಾಚಲ ಪ್ರದೇಶದ ಶಿಕ್ಷಣ ಸಚಿವರು ಹೇಳಿದ್ದಾರೆ.

“ಶಾಲೆಗಳಲ್ಲಿ ಸಂಸ್ಕೃತ  ಹಾಗೂ  ಹಿಂದಿ ಭಾಷೆಗಳಲ್ಲಿ ಭಗವದ್ಗೀತೆಯನ್ನು ಕಲಿಸಲಾಗುತ್ತದೆ. ಇದಲ್ಲದೆ ಮೂರನೇ  ತರಗತಿಯಿಂದ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಪರಿಚಯಿಸಲಾಗುವುದು ಎಂದು ಸಚಿವ ಗೋವಿಂದ್ ಸಿಂಗ್ ಠಾಕೂರ್ ಹೇಳಿದ್ದಾರೆ ಎಂದು The Tribune ವರದಿ ಮಾಡಿದೆ.

 ಈ ಬದಲಾವಣೆಗಳು ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಕಲಿಸಲು ಹಾಗೂ  ಅವರಿಗೆ "ನೈತಿಕ ವರ್ಧಕ" ನೀಡಲು ಸಹಾಯ ಮಾಡುತ್ತದೆ ಎಂದು ಸಚಿವರು ಪ್ರತಿಪಾದಿಸಿದರು.

2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಗುಜರಾತ್ ಸರಕಾರ ಘೋಷಿಸಿದ ಎರಡು ವಾರಗಳ ನಂತರ ಠಾಕೂರ್ ಈ  ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಸರಕಾರ ಕೂಡ  ರಾಜ್ಯದ ಶಾಲೆಗಳಲ್ಲಿ 'ನೈತಿಕ ಶಿಕ್ಷಣ'ದ ಭಾಗವಾಗಿ ಗೀತಾವನ್ನು ಪರಿಚಯಿಸುವ ಕುರಿತು ಚಿಂತನೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News