ಅವ್ಯವಸ್ಥೆಯ ಆಗರ ಬೆಳ್ತಂಗಡಿ ಸಮುದಾಯ ಆಸ್ಪತ್ರೆ ಸಿಬ್ಬಂದಿಯ ವಸತಿ ಗೃಹ

Update: 2022-04-07 04:15 GMT

ಬೆಳ್ತಂಗಡಿಯಲ್ಲಿ ಹಳೆ ಕಟ್ಟಡ ವಾದ್ದರಿಂದ ಸಮಸ್ಯೆ ಉಂಟಾಗಿದೆ. ಈಗಿರುವ ಹಳೆ ಕಟ್ಟಡ ತೆರವುಗೊಳಿಸಿ ವಸತಿ ಸಮುಚ್ಚಯ ನಿರ್ಮಿಸುವ ಕುರಿತು ಬೇಡಿಕೆ ಸಲ್ಲಿಸಲಾಗಿದೆ. ಸ್ವಚ್ಛತೆಗೆ ಕ್ರಮ ವಹಿಸುವ ಸಲುವಾಗಿ ಪಪಂಗೆ ಸೂಚನೆ ನೀಡಲಾಗುವುದು. ಸಮುದಾಯ ಆಸ್ಪತ್ರೆಗೆ ಸ್ವಚ್ಛತಾ ನಿರ್ವಹಣೆಗಾಗಿ ಯಾವುದೇ ಅನುದಾನಗಳು ಬರುತ್ತಿಲ್ಲ. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ವಚ್ಛತಾ ನಿರ್ವಹಣೆಯನ್ನು ಸ್ಥಳೀಯ ಗ್ರಾಪಂಗಳೇ ನಿರ್ವಹಿಸುತ್ತಿವೆ.  ಡಾ.ಕಲಾಮಧು, ತಾಲೂಕು ಆರೋಗ್ಯಾಧಿಕಾರಿ

 ಬೆಳ್ತಂಗಡಿ, ಎ.6: ತಾಲೂಕು ಸಮುದಾಯ ಆಸ್ಪತ್ರೆ ಕೇಂದ್ರದ ಸಿಬ್ಬಂದಿಯ ವಸತಿ ಗೃಹಗಳ ಸುತ್ತಮುತ್ತ ಗಿಡಗಂಟಿಗಳು ತುಂಬಿದ್ದು, ವಸತಿಗೃಹದ ಬಳಿ ತ್ಯಾಜ್ಯ ನೀರುಗಳು ಹರಿಯುವುದರಿಂದ ಗಬ್ಬು ವಾಸನೆಯೊಂದಿಗೆ ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು, ದಾದಿಯರು, ಹಿರಿಯ ಆರೋಗ್ಯ ಸಹಾಯ ಕರು, ಗ್ರೂಪ್ ಡಿ ನೌಕರರಿಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆ ವಠಾರದಲ್ಲಿ 13 ವಸತಿಗೃಹ ಗಳಿವೆ. ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸಹಿತ ದಾದಿಯರು ಸಿಬ್ಬಂದಿಗಾಗಿ ಆರೋಗ್ಯ ಇಲಾ ಖೆಯು ವಸತಿಗೃಹಗಳನ್ನೇನೋ ನಿರ್ಮಿಸಿದೆ. ಆದರೆ ಇದರ ನಿರ್ವಹಣೆ ಕಂಡಾಗ ಮಾತ್ರ ಸಾರ್ವಜನಿಕರಿಗೂ ಭಯ ಹುಟ್ಟಿ ಸುವಂತಿದೆ. ಪಾಳು ಬಿದ್ದಂತಿರುವ ಕಟ್ಟಡಗಳು, ಮನೆಸುತ್ತ ಪೊದೆಗಳು ಆವರಿಸಿರುವುದು, ಹಾವುಗಳು ಮನೆಯೊಳಗೇ ವಾಸಿಸುವ ಮಟ್ಟಿಗೆ ನಿರ್ವಹ ಣೆಯಿಲ್ಲದೆ ಕಟ್ಟಡಗಳು ಪಾಳುಬಿದ್ದ ಸ್ಥಿತಿಯಲ್ಲಿವೆ.

ಇಲ್ಲಿನ ಪರಿಸ್ಥಿತಿ ಕಂಡು ವೈದ್ಯಾಧಿಕಾರಿಗಳು ಪ್ರತ್ಯೇಕವಾಗಿ ವಾಸ್ತವ್ಯ ಹೂಡುತ್ತಿದ್ದಾರೆ. ಪ್ರಸಕ್ತ ದಾದಿಯರು, ಗ್ರೂಪ್ ಡಿ, ಔಷಧ ಉಗ್ರಾಣದ ಸಿಬ್ಬಂದಿ ಈ ಕಟ್ಟಡಗಳಲ್ಲಿ ವಾಸಿಸುತ್ತಿದ್ದಾರೆ. ದಿನಪೂರ್ತಿ ರೋಗಿಗಳ ಆರೈಕೆ ಮಾಡಿ ಬಸವಳಿದ ಆರೋಗ್ಯ ಸಿಬ್ಬಂದಿಗೆ ನೆಮ್ಮದಿ ಯಿಂದ ವಸತಿಗೃಹದಲ್ಲಿ ಒಂದೊತ್ತು ವಿಶ್ರಾಂತಿ ಪಡೆಯೋಣ ಎಂದರೆ ಅವುಗಳ ಸ್ಥಿತಿಯೂ ರೋಗಪೀಡಿತರಂತಾಗಿದೆ. ಕಳೆದ 25 ವರ್ಷ ಗಳ ಹಿಂದೆ ನಿರ್ಮಾಣವಾಗಿದ್ದ ಕಟ್ಟಡಗಳು ಸಮರ್ಪಕ ನಿರ್ವಹಣೆಯಿಲ್ಲದೆ ದುಸ್ಥಿತಿ ಯಲ್ಲಿದೆ. ದಾದಿಯರಿಗಾಗಿ ಇರುವ ಒಂದು ವಸತಿ ಗೃಹವಂತು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದರಿಂದ ಬಳಕೆಯಾಗುತ್ತಿಲ್ಲ.

ಕೆಲವೊಂದು ವಸತಿಗೃಹಗಳಲ್ಲಿ ಸಿಬ್ಬಂದಿ ವಾಸವಾಗಿದ್ದು, ಇವರ ಪಾಡು ಹೇಳತೀರ ದಾಗಿದೆ. ವಸತಿಗೃಹದ ಪಕ್ಕದಲ್ಲೇ ತ್ಯಾಜ್ಯ ನೀರು ಸಂಗ್ರಹವಾಗುತ್ತಿದ್ದು, ಗಬ್ಬು ವಾಸನೆ ಬೀರುತ್ತಿದೆ. ಅಲ್ಲದೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿಯೂ ಬೆಳೆಯುತ್ತಿದೆ.

ಪ್ರಸಕ್ತ ಇರುವ ಹಂಚಿನ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದರಿಂದ ಹಂಚಿನ ಮೇಲೆ ಟರ್ಪಾಲು ಹೊದಿಕೆ ಹಾಕಿ ವಾಸಿಸುತ್ತಿದ್ದಾರೆ. ಗೋಡೆಗಳು ಬೀಳುವ ಸ್ಥಿತಿಯಲ್ಲಿದೆ. ವಸತಿ ಗೃಹ ಸುತ್ತ ಗಿಡಗಂಟಿ ಆವರಿಸಿ ಹಾವು ಸಹಿತ ವಿಷಜಂತು ವಾಸಸ್ಥಾನವಾಗಿದೆ. ಕನಿಷ್ಠ ಸ್ವಚ್ಛತೆ ಗಾದರೂ ಇಲಾಖೆ ಆದ್ಯತೆ ನೀಡಲಿ ಎಂಬುದು ಇವರ ಒತ್ತಾಯವಾಗಿದೆ.

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News