ಡಿಆರ್ಡಿಒ ಮುಕುಟಕ್ಕೆ ಇನ್ನೊಂದು ಗರಿ: SFDR ಬೂಸ್ಟರ್ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪ್ರಯೋಗಾರ್ಥ ಉಡಾವಣೆ

Update: 2022-04-08 18:57 GMT

ಬಾಲಾಸೋರ್,ಎ.8: ಭಾರತವು ಶುಕ್ರವಾರ ಒಡಿಶಾ ಕರಾವಳಿಯಾಚೆಯ ಚಂಡಿಪುರದ ಸಮಗ್ರ ಪರೀಕ್ಷಾ ವಲಯ (ಐಟಿಆರ್)ದಿಂದ ಸಾಲಿಡ್ ಫ್ಯುಯೆಲ್ ಡಕ್ಟೆಡ್ ರ್ಯಾಮ್ಜೆಟ್ (ಎಸ್ಎಫ್ಡಿಆರ್) ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿತು. ಎಸ್ಎಫ್ಡಿಆರ್ ಆಧಾರಿತ ಮುನ್ನೂವಿಕೆಯು ಶಬ್ದಾಧಿಕ ವೇಗಗಳಲ್ಲಿ ವೈಮಾನಿಕ ಬೆದರಿಕೆಗಳನ್ನು ಪ್ರತಿಬಂಧಿಸಲು ಕ್ಷಿಪಣಿಗೆ ಅನುವು ಮಾಡುತ್ತದೆ ಎಂದು ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯು ತಿಳಿಸಿದೆ. ಸುಧಾರಿತ ಕ್ಷಿಪಣಿ ವ್ಯವಸ್ಥೆಯಲ್ಲಿನ ಎಲ್ಲ ಪ್ರಮುಖ ಭಾಗಗಳು ವಿಶ್ವಸನೀಯ ಕಾರ್ಯವನ್ನು ನಿರ್ವಹಿಸಿವೆ ಮತ್ತು ಅಭಿಯಾನದ ಎಲ್ಲ ಗುರಿಗಳನ್ನು ಪೂರೈಸಿವೆ ಎಂದು ರಕ್ಷಣಾ ಸಚಿವಾಲಯವು ಹೇಳಿದೆ.

 ಐಟಿಆರ್ ನಿಯೋಜಿಸಿದ್ದ ಟೆಲಿಮೆಟ್ರಿ,ರಾಡಾರ್ ಮತ್ತು ಎಲೆಕ್ಟ್ರೋ ಆಪ್ಟಿಕಲ್ ನಿಗಾ ತಂತ್ರಗಳಂತಹ ಹಲವಾರು ಸಾಧನಗಳು ಸೆರೆ ಹಿಡಿದಿರುವ ಮಾಹಿತಿಗಳಿಂದ ಕ್ಷಿಪಣಿ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ದೃಢಪಡಿಸಿಕೊಳ್ಳಲಾಗಿದೆ. ಎಸ್ಎಫ್ಡಿಆರ್ನ ಯಶಸ್ವಿ ಪ್ರಯೋಗಕ್ಕಾಗಿ ಡಿಆರ್ಡಿಒ ಅನ್ನು ಅಭಿನಂದಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು,ಇದು ದೇಶದೊಳಗೆ ಪ್ರಮುಖ ಕ್ಷಿಪಣಿ ಅನ್ವಯಿತ ವಿಜ್ಞಾನಗಳ ಸುಧಾರಣೆಯ ನಿಟ್ಟಿನಲ್ಲಿ ಅತ್ಯಗತ್ಯ ಮೈಲಿಗಲ್ಲು ಆಗಿದೆ ಎಂದು ಬಣ್ಣಿಸಿದರು.
ಹೈದರಾಬಾದ್ನ ಡಿಆರ್ಡಿಒ ಪ್ರಯೋಗಾಲಯವು ರೀಸರ್ಚ್ ಸೆಂಟರ್ ಇಮಾರತ್ ಹೈದರಾಬಾದ್ ಮತ್ತು ಹೈ ಎನರ್ಜಿ ಮಟೀರಿಯಲ್ಸ್ ರೀಸರ್ಚ್ ಲ್ಯಾಬೊರೇಟರಿ ಪುಣೆಯಂತಹ ಇತರ ಡಿಆರ್ಡಿಒ ಪ್ರಯೋಗಾಲಯಗಳ ಸಹಭಾಗಿತ್ವದಲ್ಲಿ ಎಸ್ಎಫ್ಡಿಆರ್ ಅನ್ನು ಅಭಿವೃದ್ಧಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News