ಪ್ರಚೋದನಾಕಾರಿ ಹಾಡು : ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

Update: 2022-04-13 01:39 GMT
ರಾಜಾ ಸಿಂಗ್

ಹೈದರಾಬಾದ್: ಶ್ರೀರಾಮ ನವಮಿ ಸಂದರ್ಭದಲ್ಲಿ ರವಿವಾರ ಪ್ರಚೋದನಾಕಾರಿ ಹಾಡು ಹಾಡಿದ ಆರೋಪದ ಮೇರೆಗೆ ಇಲ್ಲಿನ ಘೋಷಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಮನವಮಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಜಾ ಸಿಂಗ್ ಈ ಹಾಡು ಹಾಡುತ್ತಿದ್ದಂತೆ ಸೇರಿದ್ದ ಜನ ಹುಚ್ಚೆದ್ದು ಕುಣಿದಿದ್ದರು. ರಾಜಾ ಸಿಂಗ್ ಹಾಡಿನ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತರಾಗಿ ಕ್ರಮಕ್ಕೆ ಮುಂದಾಗಿದ್ದಾರೆ.

ನಗರದ ಶಹನಾಯತ್‍ ಗಂಜ್ ಪೊಲೀಸ್ ಠಾಣೆಯಲ್ಲಿ ರಾಜಾ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 295ಎ, 504 ಮತ್ತು 505ರ ಅನ್ವಯ ಪ್ರಕರಣ ದಾಖಲಾಗಿದೆ.

ಶೋಭಾಯಾತ್ರೆ ಬೇಗಂ ಬಜಾರ್ ಛಾತ್ರಿ ಬಳಿಗೆ ಸಮೀಪಿಸುತ್ತಿದ್ದಂತೆ, ರಾಜಾ ಸಿಂಗ್ ಹಿಂದಿ ಹಾಡನ್ನು ಹಾಡಿ, ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಇವರ ಹೇಳಿಕೆಗಳು ಪ್ರಚೋದನಾಕಾರಿ ಸ್ವರೂಪದ್ದಾಗಿದ್ದು, ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಮೂಡಿಸುವಂಥದ್ದು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News