ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ: ಅಣ್ಣಾಮಲೈ ಹೇಳಿಕೆ

Update: 2022-04-13 17:01 GMT

ಚೆನ್ನೈ, ಎ. 13: ಹಿಂದಿ ಹೇರಿಕೆಗೆ ಬಿಜೆಪಿಯ ರಾಜ್ಯ ಘಟಕ ಅವಕಾಶ ನೀಡಲಾರದು ಎಂದು ತಮಿಳುನಾಡು ಬಿಜೆಪಿ ವರಿಷ್ಠ ಕೆ. ಅಣ್ಣಾಮಲೈ ಮಂಗಳವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾಮಲೈ, ‘‘ರಾಜ್ಯದಲ್ಲಿ ಹಿಂದಿ ಹೇರಿಕೆಗೆ ತಮಿಳುನಾಡು ಬಿಜೆಪಿ ಅವಕಾಶ ನೀಡಲಾರದು. ನಮ್ಮ ದೇಶದಲ್ಲಿ ತಮಿಳು ಸಂಪರ್ಕ ಭಾಷೆಯಾದರೆ ಪಕ್ಷ ಹೆಮ್ಮೆ ಪಡಲಿದೆ’ ಎಂದರು.

ಕಾಂಗ್ರೆಸ್ ಹಿಂದಿ ಹೇರಲು ಪ್ರಯತ್ನಿಸಿದಾಗ, ಆಗಲೂ ಅದಕ್ಕೆ ವಿರೋಧ ವ್ಯಕ್ತವಾಗಿತ್ತು ಎಂದು ಅವರು ತಿಳಿಸಿದರು. ಹಿಂದಿ ಬಾಷೆ ಇಂಗ್ಲೀಷ್ ಗೆ ಪರ್ಯಾಯ ಭಾಷೆ ಎಂಬುದನ್ನು ಒಪ್ಪಿಕೊಳ್ಳಬೇಕಾದ ಅಗತ್ಯತೆ ಇದೆ. ಆದರೆ, ಅದು ಸ್ಥಳೀಯ ಭಾಷೆಗೆ ಪರ್ಯಾಯವಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒತ್ತಿ ಹೇಳಿದ ಬಳಿಕ ಅಣ್ಣಾಮಲೈ ಈ ಹೇಳಿಕೆ ನೀಡಿದ್ದಾರೆ. 

ತೈಲ ಬೆಲೆ ಏರಿಕೆ ಕುರಿತು ಅವರು, ಎಲ್ಲ ರಾಜ್ಯ ಸರಕಾರಗಳು ತೈಲದ ಮೇಲಿನ ತೆರಿಗೆ ಇಳಿಕೆ ಮಾಡಬೇಕು ಎಂದರು. ಅಲ್ಲದೆ, ತೆರಿಗೆ ಇಳಿಕೆ ಮಾಡುವ ಮೂಲಕ ಜನರಿಗೆ ಪರಿಹಾರ ನೀಡುವಂತೆ ತಮಿಳುನಾಡು ಸರಕಾರವನ್ನು ಆಗ್ರಹಿಸಿದರು. ಕೇಂದ್ರ ಸರಕಾರ ರಶ್ಯದಿಂದ ತೈಲ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ. ಆದರೆ, ಅದುವರೆಗೆ ರಾಜ್ಯ ಸರಕಾರಗಳು ತೈಲದ ಮೇಲಿನ ತೆರಿಗೆ ಇಳಿಕೆ ಮಾಡಬೇಕು ಎಂದು ಅಣ್ಣಾಮಲೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News