ಹೊಸದಿಲ್ಲಿ: ಸಿಎನ್​ಜಿ ದರದಲ್ಲಿ ಮತ್ತೆ ಏರಿಕೆ; ಎಪ್ರಿಲ್‌ ತಿಂಗಳಲ್ಲಿ ಐದನೇ ಬಾರಿ ಹೆಚ್ಚಳ

Update: 2022-04-14 11:26 GMT

ಹೊಸದಿಲ್ಲಿ: ದಿಲ್ಲಿ ಮತ್ತು ಎನ್‌ಸಿಆರ್‌ ಪ್ರದೇಶದಲ್ಲಿ ಸಂಕುಚಿತ ನೈಸರ್ಗಿಕ ಅನಿಲ ಅಥವಾ ಸಿಎನ್‌ಜಿ ಬೆಲೆ ಈ ತಿಂಗಳು ಐದನೇ ಬಾರಿ ಏರಿಕೆ ಕಂಡಿದೆ. ಸಿಎನ್‌ಜಿ ಬೆಲೆಯಲ್ಲಿ ಕೆಜಿಗೆ 2.50 ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಗುರುವಾರ ತಿಳಿಸಿದೆ.

ಏಪ್ರಿಲ್ 1 ರಿಂದ ಗ್ಯಾಸ್ ಬೆಲೆ ಪ್ರತಿ ಕೆಜಿಗೆ 14.98 ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ದಿಲ್ಲಿಯಲ್ಲಿ ಈಗ ಸಿಎನ್‌ಜಿ ದರ 71.61 ರೂ. ಇದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯ ಪ್ರಕಾರ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಪ್ರತಿ ಕೆಜಿಗೆ 74.17 ರೂ., ಗುರುಗ್ರಾಮ್‌ನಲ್ಲಿ ಗ್ಯಾಸ್ ಬೆಲೆ ಕೆಜಿಗೆ 79.94 ರೂ. ಇದೆ. 
ತೆರಿಗೆ ಮತ್ತು ಸರಕು ಸಾಗಣೆ ಶುಲ್ಕಗಳಿಂದಾಗಿ ರಾಜ್ಯಗಳಲ್ಲಿ ಗ್ಯಾಸ್ ಬೆಲೆಗಳು ಬದಲಾಗುತ್ತವೆ.

ಈ ನಡುವೆ, ಮನೆಗಳಿಗೆ ಅನಿಲವನ್ನು ಪೂರೈಸಲು ಬಳಸುವ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಪಿಎನ್‌ಜಿ ಬೆಲೆಯು ದೆಹಲಿಯಲ್ಲಿ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಅಥವಾ ಎಸ್‌ಸಿಎಂಗೆ 4.25 ರೂ.ಗಳಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News