ರಾಜ್ಯಸಭೆಯ ವೇತನ ರೈತರ ಹೆಣ್ಣು ಮಕ್ಕಳ ಶಿಕ್ಷಣ, ಕಲ್ಯಾಣಕ್ಕಾಗಿ ನೀಡುವೆ: ಹರ್ಭಜನ್ ಸಿಂಗ್

Update: 2022-04-16 10:12 GMT

ಚಂಡೀಗಢ: ತನಗೆ ಲಭಿಸುವ ರಾಜ್ಯಸಭೆಯ ವೇತನವನ್ನು ರೈತರ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ  ಕಲ್ಯಾಣಕ್ಕಾಗಿ ನೀಡುವುದಾಗಿ ಕ್ರಿಕೆಟಿಗ ಹಾಗೂ  ರಾಜಕಾರಣಿ ಹರ್ಭಜನ್ ಸಿಂಗ್ ಇಂದು ಘೋಷಿಸಿದ್ದಾರೆ.

ರಾಜ್ಯಸಭಾ ಸದಸ್ಯನಾಗಿ "ದೇಶದ ಒಳಿತಿಗಾಗಿ" ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಸಿಂಗ್ ಹೇಳಿದರು.

"ರಾಜ್ಯಸಭಾ ಸದಸ್ಯನಾಗಿ, ನಾನು ನನ್ನ ರಾಜ್ಯಸಭಾ  ವೇತನವನ್ನು ರೈತರ ಹೆಣ್ಣುಮಕ್ಕಳ ಶಿಕ್ಷಣ ಹಾಗೂ  ಕಲ್ಯಾಣಕ್ಕಾಗಿ ಕೊಡುಗೆ ನೀಡಲು ಬಯಸುತ್ತೇನೆ. ನಮ್ಮ ರಾಷ್ಟ್ರದ ಸುಧಾರಣೆಗೆ ಕೊಡುಗೆ ನೀಡುವೆ ಹಾಗೂ  ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ಜೈ ಹಿಂದ್" ಎಂದು ಹರ್ಭಜನ್ ಟ್ವೀಟ್‌ನಲ್ಲಿ ಹೇಳಿದರು..

ಹರ್ಭಜನ್ ಸಿಂಗ್ ಕಳೆದ ತಿಂಗಳು ಪಂಜಾಬ್‌ನಿಂದ ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ಆಮ್ ಆದ್ಮಿ ಪಕ್ಷವು (ಎಎಪಿ) ಮಾರ್ಚ್ 31 ರ ರಾಜ್ಯಸಭಾ ಚುನಾವಣೆಗೆ ಹರ್ಭಜನ್ ಸಿಂಗ್, ಪಕ್ಷದ ನಾಯಕ ರಾಘವ್ ಚಡ್ಡಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಸಂಸ್ಥಾಪಕ ಅಶೋಕ್ ಮಿತ್ತಲ್, ಐಐಟಿ ದಿಲ್ಲಿ ಪ್ರೊಫೆಸರ್ ಸಂದೀಪ್ ಪಾಠಕ್ ಹಾಗೂ  ಕೈಗಾರಿಕೋದ್ಯಮಿ ಸಂಜೀವ್ ಅರೋರಾ ಅವರನ್ನು ನಾಮನಿರ್ದೇಶನ ಮಾಡಿತ್ತು. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.

ಪಂಜಾಬ್‌ನಲ್ಲಿ ಆಪ್ 117 ವಿಧಾನಸಭಾ ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದ ನಂತರ ಕ್ಲೀನ್ ಸ್ವೀಪ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News