"ಸೋಶಿಯಲ್‌ ಮೀಡಿಯಾ ಪೋಸ್ಟ್‌ ಗಳ ಬಗ್ಗೆ ನೀಡಿರುವ ನೋಟಿಸನ್ನು ತಪ್ಪಾಗಿ ಅರ್ಥೈಸಲಾಗಿದೆ"

Update: 2022-04-16 17:38 GMT
Photo: telegraphindia.com 

ಮುಂಬೈ, ಎ. 16: ತನ್ನ ನೋಟಿಸಿನಲ್ಲಿರುವ ಪದಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಶನಿವಾರ ಹೇಳಿದೆ. ಸಾಮಾಜಿಕ ಮಾಧ್ಯಮದಲ್ಲಿ ಸರಕಾರ ವಿರೋಧಿ ಹೇಳಿಕೆಯಿಂದ ದೂರವಿರುವಂತೆ ತನ್ನ ಉದ್ಯೋಗಿಗಳಿಗೆ ನೋಟಿಸು ನೀಡಿದ ದಿನಗಳ ಬಳಿಕ ಟಿಐಎಫ್ಆರ್ ಈ ಹೇಳಿಕೆ ನೀಡಿದೆ. 

ಅಣು ಇಂಧನ ಇಲಾಖೆ (ಡಿಎಇ)ಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿರುವ ಟಿಐಎಫ್ಐರ್, ಸಂಸ್ಥೆ ಅಥವಾ ಸರಕಾರದ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡಲು ಪೂರ್ವಾನುಮತಿ ಅಗತ್ಯ ಎಂದು ತಿಳಿಸಿದೆ. 

ತನ್ನ ನೋಟಿಸಿನಲ್ಲಿ ಉಲ್ಲೇಖಿಸಲಾದ ನಿಯಮಗಳು ಈಗಾಗಲೇ ಅಸ್ತಿತ್ವದಲ್ಲಿ ಇದೆ. ಸಾಮಾಜಿಕ ಮಾಧ್ಯಮ, ಟಿ.ವಿ.ಯಂತಹ ಇಲೆಕ್ಟ್ರಾನಿಕ್ಸ್ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳಿಗೆ ಈ ನಿಯಮಗಳು ಅನ್ವಯವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ಹೊಸ ನೋಟಿಸು ನೀಡಲಾಗಿತ್ತು ಎಂದು ಅದು ಹೇಳಿದೆ.

‘ಡಿಎಇ ನೋಟಿಸು ಜಾರಿಗೊಳಿಸಿದ ಹಿನ್ನೆಲೆಯಲ್ಲಿ 2022 ಎಪ್ರಿಲ್ 13ರಂದು ಟಿಐಎಫ್ಆರ್  ರಿಜಿಸ್ಟ್ರಾರ್ ಟಿಐಎಫ್ಆರ್ ನ ಎಲ್ಲ ಉದ್ಯೋಗಿಗಳಿಗೆ ನೋಟಿಸು ಹೊರಡಿಸಿದ್ದರು. ಸಂಸ್ಥೆಯ ಆವರಣದ ಫೋಟೊ ಅಥವಾ ವೀಡಿಯೋ ಪೋಸ್ಟ್ ಮಾಡುವುದು, ವ್ಯಾಟ್ಸ್ಆ್ಯಪ್, ಫೇಸ್ಬುಕ್‌ ನಂತಹ ಸಾಮಾಜಿಕ ಜಾಲ ತಾಣದಲ್ಲಿ ಸರಕಾರದ ವಿರುದ್ಧದ ಹೇಳಿಕೆಗಳನ್ನು ಪೋಸ್ಟ್ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವುದನ್ನು ಈ ನೋಟಿಸಿನಲ್ಲಿ ತಿಳಿಸಲಾಗಿತ್ತುʼ ಎಂದು ಟಿಐಎಫ್ಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News