ಕಲ್ಲು ತೂರಾಟ ಆರೋಪಿಸಿ ಕೈಯಿಲ್ಲದ ವ್ಯಕ್ತಿಯ ಅಂಗಡಿಯನ್ನು ಧ್ವಂಸಗೊಳಿಸಿದ ಮಧ್ಯಪ್ರದೇಶ ಸರ್ಕಾರ

Update: 2022-04-18 18:47 GMT
Photo: twitter/KashifKakvi

ಖಾರ್ಗೋನ್:‌ ಖಾರ್ಗೋನ್‌ ಜಿಲ್ಲೆಯಲ್ಲಿ ನಡೆದ ಗಲಭೆ ಸಂಬಂಧಿಸಿದಂತೆ ಕಲ್ಲು ತೂರಾಟ ಪ್ರಕರಣದ ಆರೋಪಿಗಳ ಆರೋಪ ಸಾಬೀತಾಗದೆಯೇ ಮಧ್ಯಪ್ರದೇಶ ಸರ್ಕಾರ ಅವರಿಗೆ ಸಂಬಂಧಪಟ್ಟ ಆಸ್ತಿಗಳನ್ನು ನೆಲಸಮ ಮಾಡುತ್ತಿದೆ. ಇದೀಗ 2005 ರಲ್ಲಿ ಅಪಘಾತ ಒಂದರಲ್ಲಿ ಕೈಗಳನ್ನು ಕಳೆದುಕೊಂಡ ವ್ಯಕ್ತಿಯನ್ನು ಕಲ್ಲು ತೂರಾಟ ಪ್ರಕರಣದಲ್ಲಿ ಆರೋಪಿಯನ್ನಾಗಿಸಿ, ಅವರ ಅಂಗಡಿಯನ್ನು ಮಧ್ಯಪ್ರದೇಶ ಸರ್ಕಾರ ನೆಲಸಮಗೊಳಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಕಲ್ಲು ತೂರಾಟ ಆರೋಪಿಗಳೆಂದು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ ಎಂಬ ಮಧ್ಯಪ್ರದೇಶದ ಸರ್ಕಾರದ ವಿರುದ್ಧ ಇರುವ ಆರೋಪಗಳಿಗೆ ಈ ಘಟನೆಯಿಂದ ಪುಷ್ಟಿ ಸಿಕ್ಕಂತಾಗಿದೆ. ಪತ್ರಕರ್ತ ಕಾಶಿಫ್‌ ಕಾಖ್ವಿ ಪ್ರಕಾರ, ವಾಸಿಂ ಶೇಖ್‌, ಸರ್ಕಾರದ ಕ್ರೂರ ದಮನ ನೀತಿಯಿಂದ ಸಂತ್ರಸ್ತರಾದವರು.

ಎರಡೂ ಕೈಗಳಿಲ್ಲದ ವಾಸಿಂ ಶೇಖ್‌ ಅವರ ಫೋಟೋವನ್ನು ಟ್ವಿಟರಿನಲ್ಲಿ ಶೇರ್‌ ಮಾಡಿರುವ ಕಾಖ್ವಿ, ʼಶೇಖ್‌ ಅವರು 2005 ರಲ್ಲಿ ನಡೆದ ವಿದ್ಯುತ್‌ ಶಾಕ್‌ ನಿಂದ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಖಾರ್ಗೋನ್‌ ಗಲಭೆಯಲ್ಲಿ ಅವರನ್ನು ಕಲ್ಲು ತೂರಾಟದ ಆರೋಪಿ ಎಂದು ಗುರುತಿಸಿ ಅವರ ಅಂಗಡಿಯನ್ನು ನೆಲಸಮಗೊಳಿಸಲಾಗಿದೆ. ಎರಡು ಮಕ್ಕಳ ತಂದೆಯಾಗಿರುವ ಶೇಖ್‌, ಐವರು ಸದಸ್ಯರನ್ನು ಹೊಂದಿರುವ ಅವರ ಕುಟುಂಬವನ್ನು ಪೋಷಿಸಬೇಕಿದೆ, ಆದರೂ ಅವರ ಅಂಗಡಿಯನ್ನು ನೆಲಸಮಗೊಳಿಸಲಾಗಿದೆʼ ಎಂದು ಟ್ವೀಟ್‌ ಮಾಡಿದ್ದಾರೆ.

 ಬಿಜೆಪಿ ಸರ್ಕಾರದ ಕ್ರಮಕ್ಕೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, “ಬಿಜೆಪಿಯ ಹಿಂದುತ್ವ ಸಿದ್ಧಾಂತದಲ್ಲಿ ಮಾನವೀಯತೆಗೆ ಸ್ಥಾನವಿಲ್ಲ. ಇದು ರಾಜ್ಯ ಸರ್ಕಾರದ ಕಾನೂನಿನ ತೋಳುಗಳನ್ನು ಕತ್ತರಿಸಲಾಗಿದೆ. ಬಡವರನ್ನು ಬಡವರು ಮತ್ತು ನಿರಾಶ್ರಿತರನ್ನಾಗಿ ಮಾಡಿದ ನಂತರ ಅದು ಶಕ್ತಿಯುತವಾಗಿದೆ. ಇದು ಮುಸ್ಲಿಂ ಸಮುದಾಯಕ್ಕೆ ಕಾನೂನುಬಾಹಿರ ಸಾಮೂಹಿಕ ಶಿಕ್ಷೆಯನ್ನು ನೀಡುವ ಗೀಳನ್ನು ಹೊಂದಿದೆ” ಎಂದು ಟ್ವೀಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News