ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಸ್ಫೋಟ: ಓರ್ವ ಮೃತ್ಯು, 9 ಮಂದಿಗೆ ಗಾಯ

Update: 2022-04-22 02:41 GMT

ಹೈದರಾಬಾದ್: ಎಲೆಕ್ಟ್ರಿಕ್ ಸ್ಕೂಟರ್ ನ  ಬೇರ್ಪಡಿಸಬಹುದಾದ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧರೊಬ್ಬರು ಮೃತಪಟ್ಟು, ಇತರ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ತೆಲಂಗಾಣದ ನಿಝಾಮಾಬಾದ್‍ನಿಂದ ವರದಿಯಾಗಿದೆ.

ಮನೆಯಲ್ಲಿ ಬ್ಯಾಟರಿ ಚಾರ್ಜ್‍ಗೆ ಇಟ್ಟಾಗ ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಬೆಂಕಿ ಆವರಿಸಿದ್ದು, ಗಾಯಗೊಂಡಿದ್ದಾರೆ.

ಸುಟ್ಟ ಗಾಯಗಳಿಂದ ಮೃತಪಟ್ಟ ವ್ಯಕ್ತಿಯನ್ನು ರಾಮಸ್ವಾಮಿ ಎಂದು ಗುರುತಿಸಲಾಗಿದೆ. ಅವರ ಮಗ ಪ್ರಕಾಶ್, ಕಮಲಮ್ಮ ಮತ್ತು ಸೊಸೆ ಕೃಷ್ಣವೇಣಿ ಅವರು ತಂದೆಯನ್ನು ರಕ್ಷಿಸಲು ಮುಂದಾದಾಗ ಅವರಿಗೂ ತೀವ್ರ ಸುಟ್ಟ ಗಾಯಗಳಾಗಿವೆ. ಪ್ರಕಾಶ್ ಕಳೆದ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು ಎನ್ನಲಾಗಿದೆ.

ದ್ವಿಚಕ್ರ ವಾಹನದ ಉತ್ಪಾದಕ ಕಂಪನಿ ಪ್ಯೂರ್ ಇವಿ ವಿರುದ್ಧ ಪೊಲೀಸರು ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಕಂಪನಿ, ಕುಟುಂಬಕ್ಕೆ ಸಾಂತ್ವನ ಹೇಳಿದೆ.

ಆದರೆ ಪ್ಯೂರ್ ಇವಿ ಬಳಿ ಈ ವಾಹನ ಮಾರಾಟ ಅಥವಾ ಸರ್ವೀಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಾಹನವನ್ನು ಸೆಕೆಂಡ್ ಹ್ಯಾಂಡ್ ಸೇಲ್‍ನಲ್ಲಿ ಖರೀದಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸರ್ಕಾರ ಒಂದೆಡೆ ಇವಿ ವಾಹನಗಳಿಗೆ ಒತ್ತು ನೀಡುತ್ತಿದ್ದರೆ ಇನ್ನೊಂದೆಡೆ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚುಹೆಚ್ಚಾಗಿ ವರದಿಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News