ವಿದೇಶದಿಂದ ಕಲ್ಲಿದ್ದಲು ಆಮದಿಗೆ ಮಹಾರಾಷ್ಟ್ರ ಸರಕಾರ ನಿರ್ಧಾರ: ಅಜಿತ್ ಪವಾರ್

Update: 2022-04-22 09:23 GMT

ಪುಣೆ: ರಾಜ್ಯದಲ್ಲಿ ಪ್ರಸ್ತುತ ಲೋಡ್ ಶೆಡ್ಡಿಂಗ್ ಬಿಕ್ಕಟ್ಟನ್ನು ಎದುರಿಸಲು ವಿದ್ಯುತ್ ಉತ್ಪಾದನೆಗಾಗಿ ವಿದೇಶದಿಂದ ಸ್ವಲ್ಪ ಮಟ್ಟಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಶುಕ್ರವಾರ ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ಒಂದು ಕಲ್ಲಿದ್ದಲು ಗಣಿಯನ್ನು ಮಹಾರಾಷ್ಟ್ರದ ವಿದ್ಯುತ್ ಇಲಾಖೆಗೆ ಹಂಚಿಕೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ದೇಶದಲ್ಲಿ ಕಲ್ಲಿದ್ದಲು ಪೂರೈಕೆ ಆಗಬೇಕಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ದೂರಿದರು.

''ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ.  ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಿದ್ದು, ಲೋಡ್ ಶೆಡ್ಡಿಂಗ್ ವಿಚಾರವಾಗಿ ಪ್ರತಿ ವಾರ ವಿದ್ಯುತ್ ಇಲಾಖೆ ಪರಿಶೀಲನೆ ನಡೆಸುತ್ತಿದ್ದೇನೆ.  ದೇಶದಲ್ಲಿ ಯಾವುದೇ ವಿದ್ಯುತ್ ಲಭ್ಯತೆ ಇದೆಯೇ ಎಂದು ಪರಿಶೀಲಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ " ಎಂದು ಅವರು ಹೇಳಿದರು.

"ಹಲವು ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆ ಸಾಕಷ್ಟಿಲ್ಲ. ಮಹಾರಾಷ್ಟ್ರಕ್ಕೂ ಸಾಕಷ್ಟು ಪೂರೈಕೆಯಾಗುತ್ತಿಲ್ಲ ಹಾಗಾಗಿಯೇ ಹೊರದೇಶದಿಂದ ಸ್ವಲ್ಪ ಮಟ್ಟಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದೇವೆ. ಇದಲ್ಲದೆ, ಮಹಾರಾಷ್ಟ್ರ ಸ್ಟೇಟ್ ಪವರ್ ಜನರೇಷನ್ ಕಂಪನಿ ಲಿಮಿಟೆಡ್ (ಮಹಾಗೆಂಕೊ) ಗೆ ಒಂದು ಕಲ್ಲಿದ್ದಲು ಗಣಿ ಮಂಜೂರು ಮಾಡಲು ಪ್ರಯತ್ನಿಸಲಾಗುತ್ತಿದೆ'' ಎಂದು  ಪವಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News