ಗುವಾಹಟಿ ಮನಪಾ ಚುನಾವಣೆ: ಕ್ಲೀನ್ ಸ್ವೀಪ್ ಸಾಧಿಸಿದ ಬಿಜೆಪಿ ಮೈತ್ರಿಕೂಟ

Update: 2022-04-24 19:01 GMT
photo:twitter/
@OpIndia_com

ಗುವಾಹಟಿ,ಎ.24: ಗುವಾಹಟಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಕ್ಲೀನ್ ಸ್ವೀಪ್ ಸಾಧಿಸಿದೆ. ಒಟ್ಟು 60 ಸ್ಥಾನಗಳ ಪೈಕಿ 52 ವಾರ್ಡ್ಗಳನ್ನು ಬಿಜೆಪಿ ಬಾಚಿಕೊಂಡಿದ್ದರೆ,ಮಿತ್ರಪಕ್ಷ ಎಜಿಪಿ ಆರು ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. ಆಪ್ ಮತ್ತು ಎಜೆಪಿ ತಲಾ ಒಂದು ಸ್ಥಾನ ಗಳಿಸಿವೆ.
ಮೂರು ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ 57 ವಾರ್ಡ್ಗಳಿಗಾಗಿ ಶುಕ್ರವಾರ ಚುನಾವಣೆ ನಡೆದಿತ್ತು. ಒಂಭತ್ತು ವರ್ಷಗಳ ವಿರಾಮದ ಬಳಿಕ ನಡೆದಿದ್ದ ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆಯನ್ನು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News