ಬಾಲಕರಿಗೆ ಲೈಂಗಿಕ ಕಿರುಕುಳ: ಕೇರಳ ಪಾದ್ರಿಗೆ 18 ವರ್ಷಗಳ ಜೈಲು ಶಿಕ್ಷೆ

Update: 2022-04-30 17:37 GMT

ಕೊಲ್ಲಂ (ಕೇರಳ), ಎ. 30: ಐದು ವರ್ಷಗಳ ಹಿಂದೆ ಕೊಲ್ಲಂ ಜಿಲ್ಲೆಯ ಸೆಮಿನರಿಯೊಂದರಲ್ಲಿ ನಾಲ್ವರು ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಕ್ರಿಶ್ಚಿಯನ್ ಪಾದ್ರಿಗೆ ಕೇರಳ ನ್ಯಾಯಾಲಯ 18 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚೆನ್ನೈ ಮೂಲದ ಎಸ್ಡಿಎಂ ಮೈನರ್ ಸೆಮಿನರಿಯ ಸದಸ್ಯರಾಗಿರುವ ಫಾದರ್ ಥಾಮಸ್ ಪಾಲೆಕ್ಕುಳಂ (35) ಅವರನ್ನು ನ್ಯಾಯಾಲಯ ಶು್ರವಾರ ದೋಷಿ ಎಂದು ಪರಿಗಣಿಸಿತ್ತು.

ಸಂತ್ರಸ್ತರು ಘಟನೆ ನಡೆದ ಸಂದರ್ಭ 16 ವರ್ಷಗಳ ಬಾಲಕರಾಗಿದ್ದರು. ಜಿಲ್ಲೆಯ ಪುಲ್ಲಮಾಲಾದಲ್ಲಿರುವ ಸೆಮಿನರಿಯ ವಿದ್ಯಾರ್ಥಿಯಾಗಿದ್ದರು. ಆಗ ದೋಷಿ ಅದೇ ಸೆಮಿನರಿಯ ರೆಕ್ಟರ್ ಆಗಿದ್ದ. ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ (ಪೊಕ್ಸೊ) ಕೆ.ಎನ್. ಸುಜಿತ್ ಸಂತ್ರಸ್ತರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News