ರಾಜಸ್ಥಾನ: ಬಾರ್ಮರ್‌ ರೈಲು ನಿಲ್ದಾಣಕ್ಕೆ ʼಮಹೇಶ್‌ ನಗರʼ ಎಂದು ಮರುನಾಮಕರಣ

Update: 2022-05-02 10:04 GMT
Photo: ANI

ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ.  ಮರುನಾಮಕರಣಗೊಂಡ ನಿಲ್ದಾಣದ ಉದ್ಘಾಟನಾ ಸಮಾರಂಭ ಎಪ್ರಿಲ್ 30 ರಂದು ನಡೆಯಲಿದ್ದು, ಕೇಂದ್ರ ಸಚಿವರು ಹಾಗೂ ಸರಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು The  Indian Express ವರದಿ ಮಾಡಿದೆ.

ಅಧಿಕಾರಿಗಳ ಪ್ರಕಾರ, ರಾಜ್ಯದ  ಬಿಜೆಪಿ ಸರಕಾರವು 2018 ರಲ್ಲಿ ಸಮದಾರಿ ಪಂಚಾಯತ್ ಸಮಿತಿಯ ಅಡಿಯಲ್ಲಿ ಬರುವ  ಮಿಯಾನ್ ಕಾ ಬಡಾ ಗ್ರಾಮದ ಹೆಸರನ್ನು ಮಹೇಶ್ ನಗರ ಎಂದು ಬದಲಾಯಿಸಿತು ಹಾಗೂ  ರಾಜ್ಯ ಕಂದಾಯ ದಾಖಲೆಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿತ್ತು.

"ಸ್ವಾತಂತ್ರ್ಯ ಬಂದಾಗಿನಿಂದ, ಹಳ್ಳಿಯ ಹೆಸರು ಹೇಗೋ ಮಿಯಾನ್ ಕಾ ಬಡಾ ಎಂದು ಕರೆಯಲ್ಪಟ್ಟಿತು. ಮಿಯಾನ್ ಕಾ ಬಡಾ ಎಂಬ ಹೆಸರಿಗೆ ಪೂರಕವಾಗಿ ಯಾವುದೇ ಮುಸ್ಲಿಂ ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿಲ್ಲ ಎಂದು ಉಲ್ಲೇಖಿಸಿ ಗ್ರಾಮಸ್ಥರು ಗ್ರಾಮದ ಹೆಸರನ್ನು ಬದಲಾಯಿಸಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು. 2018 ರಲ್ಲಿ ಆಗಿನ ರಾಜ್ಯ ಸರಕಾರವು ಗ್ರಾಮದ ಹೆಸರನ್ನು ಮಿಯಾನ್ ಕಾ ಬಡಾದಿಂದ ಮಹೇಶ್ ನಗರ ಎಂದು ಬದಲಾಯಿಸಿದೆ ಹಾಗೂ  ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ” ಎಂದು ಬಾರ್ಮರ್‌ನ ಸಿವಾನಾ  ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕುಸುಮ್ ಲತಾ ಚೌಹಾಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News