ಶೇರು ಪೇಟೆಯಲ್ಲಿ ತಲ್ಲಣ: 1307 ಅಂಕಗಳಿಗೆ ಕುಸಿದ ಸೆನ್ಸೆಕ್ಸ್; ಹೂಡಿಕೆದಾರರಿಗೆ 6.27 ಲಕ್ಷ ಕೋಟಿ ರೂ. ನಷ್ಟ

Update: 2022-05-04 18:09 GMT
ಸಾಂದರ್ಭಿಕ ಚಿತ್ರ: PTI 

ಹೊಸದಿಲ್ಲಿ, ಮೇ 10 : ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಬಡ್ಡಿದರದಲ್ಲಿ ಹೆಚ್ಚಿಸುವ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರದಿಂದ ಶೇರು ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿದ್ದು, ಬುಧವಾ ಶೇರು ಸೂಚ್ಯಂಕ (ಸೆನ್ಸೆಕ್ಸ್) ವೌಲ್ಯ ಪಾತಾಳಕ್ಕೆ ಕುಸಿದಿದೆ.

ಮುಂಬೈ ಶೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕವು ದಿನದ ವಹಿವಾಟು ಅಂತ್ಯಕ್ಕೆ 1307 ಅಂಕಗಳಿಗೆ ಅಥವಾ 2.29 ಶೇಕಡಾಕ್ಕೆ ಕುಸಿದಿದ್ದು, 5,669ರಲ್ಲಿ ಸ್ಥಿರಗೊಂಡಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆ (ನಿಫ್ಟಿ)ಯಲಲಿ ಸೆನ್ಸೆಕ್ಸ್ 392 ಅಂಶ ಅಥವಾ 2.29 ಶೇಕಡದಷ್ಟು ಇಳಿಕೆಯಾಗಿದ್ದು, 16,678ರಲ್ಲಿ ಸ್ಥಿರಗೊಂಡಿತು.

ನಿಫ್ಟಿಯಲ್ಲಿ ಗ್ರಾಹಕ ಸಾಮಾಗ್ರಿಗಳು, ಲೋಹ ತಯಾರಿಕಾ ಕೈಗಾರಿಕೆಗಳು ಹಾಗೂ ಹಣಕಾಸುಸೇವಾ ಕಂಪನಿಗಳ ಶೇರು ಮೌಲ್ಯಗಳಲ್ಲಿ ಕ್ರಮವಾಗಿ ಶೇ.3.62, ಶೇ.3.21 ಹಾಗೂ ಶೇ.2.61ರಷ್ಟು ಇಳಿಕೆಯಾಗಿದೆಯ ಒಟ್ಟಾರೆಯಾಗಿ ನಿಫ್ಟಿಯಲ್ಲಿ 15ಕ್ಕಿಂತಲೂ ಅಧಿಕ ವಲಗಳ ಕಂಪೆನಿಗಳ ಶೇರು ಮೌಲ್ಯದಲ್ಲಿ ಕುಸಿತವುಂಟಾಗಿದೆ ಎಂಮ ಅದು ಹೇಳಿದೆ.

ಇತ್ತ ಮುಂಬೈ ಶೇರು ಮಾರುಕಟ್ಟೆ (ಬಿಎಸ್ಇ)ಯಲ್ಲಿ ಬಜಾಜ್ ಫೈನಾನ್ಸ್, ಟೈಟಾನ್, ಇಂಡಸ್ಇಂಡ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ರಿಲಾಯನ್ಸ್ ಇಂಡಸ್ಟ್ರೀಸ್, ಏಶ್ಯನ್ ಪೈಂಟ್ಸ್, ಮಾರುತಿ, ಡಾ. ರೆಡ್ಡಿಸ್ ಹಾಗೂ ಆ್ಯಕ್ಸಿಸ್ ಬ್ಯಾಂಕ್ಗಳ ಶೇರು ವೌಲ್ಯದಲ್ಲಿ ಭಾರೀ ಕುಸಿತವುಂಟಾಗಿದೆ.

ರೆಪೊ ದರದ ಹೆಚ್ಚಳದ ಬೆನ್ನಲ್ಲೇ ಶೇರು ಹೂಡಿಕೆದಾರರು ದಿಢೀರನೇ ಶೇರುಗಳ ಮಾರಾಟಕ್ಕೆ ಮಾರಾಟಕ್ಕೆ ಮುಂದಾಗಿದ್ದುದೇ ಶೇರು ಮೌಲ್ಯಗಳಕುಸಿತಕ್ಕೆ ಕಾರಣವೆನ್ನಲಾಗಿದೆ.
ಇಂದಿನ ವಹಿವಾಟಿನಲ್ಲಿ ಬಿ ಲಿಸ್ಟಡ್ ಕಂಪೆನಿಗಳ ಶೇರು ಹೂಡಿಕೆದಾರರಿಗೆ ಒಟ್ಟು 6.27 ಕೋಟಿ ರೂ. ನಷ್ಟವಾಗಿರುವುದಾಗಿ ತಿಳಿದುಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಪವರ್ಗ್ರಿಡ್, ಎನ್ಟಿಪಿಸಿ ಹಗೂ ಕೊಟಾಕ್ ಮಹೀಂದ್ರಾ ಬ್ಯಾಂಕ್ಗಳ ಶೇರು ವೌಲ್ಯಗಳಲ್ಲಿ ಚೇತರಿಕೆ ಕಂಡುಬಂದಿದೆ.

ದುಬಾರಿಯಾಗಲಿದೆ ಇಎಂಐ

ವಾಣಿಜ್ಯ ಬ್ಯಾಂಕುಗಳಿಗೆ ಆರ್ಬಿಐ ನೀಡುವ ಅಲ್ಪಾವಧಿಯ ಸಾಲದ ದರವನ್ನು ರೆಪೊ ದರ ಎನ್ನಲಾಗುತ್ತದೆ. ರೆಪೊ ದರದಲ್ಲಿ ಹೆಚ್ಚಳ ಮಾಡುವುದರಿಂದ ಬ್ಯಾಂಕುಗಳಿಗೆ ಆರ್ಬಿಐನಿಂದ ಸಾಲ ಪಡೆಯುವುದು ದುಬಾರಿಯಾಗಲಿದೆ ಮತ್ತು ತಮ್ಮ ನಿಧಿಗಳನ್ನು ಬ್ಯಾಂಕುಗಳು ಅತ್ಯಂತ ವಿವೇಚನೆಯೊಂದಿಗೆ ಬಳಸಿಕೊಳ್ಳಬೇಕಾಗುತ್ತದೆ.

ಆರ್ಬಿಐ ರೆಪೊ ದರದಲ್ಲಿ ಹೆಚ್ಚಳವನ್ನು ಮಾಡುವುದರಿಂದ ಬ್ಯಾಂಕುಗಳು ತಾವು ಗ್ರಾಹಕರಿಗೆ ನೀಡುವ ಸಾಲದ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಗೃಹ ಸಾಲಗಳು, ವಾಹನ ಸಾಲಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ವಿಧಿಸಲಾಗುವ ಬಡ್ಡಿದರವು ಹೆಚ್ಚಳವಾಗಲಿದೆ. ಆರ್ಬಿಐನ ರೆಪೊ ಏರಿಕೆಯ ಘೋಷಣೆಯ ಬಳಿಕ ವಾಣಿಜ್ಯ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಾವು ನೀಡುವ ಹೊಸ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದು ಬಹುತೇಕ ಖಚಿತವಾಗಿದೆ.

ಇದರಿಂದಾಗಿ ಹೊಸ ಸಾಲಗಳನ್ನು ಪಡೆಯುವವರು ಇನ್ನೂ ಅಧಿಕ ಇಎಂಐ ಬಡ್ಡಿದರವನ್ನು ಪಾವತಿಸಬೇಕಾಗುವುದು. ಸಾಲ ಪಡೆದ ನಮನೀಯ (ಫ್ಲೆಕ್ಸಿಬಲ್) ಬಡ್ಡಿದರವನ್ನು ಆಯ್ಕೆ ಮಾಡಿಕೊಂಡ ಹಾಲಿ ಸಾಲಗಾರರಿಗೂ ರೆಪೊ ದರ ಏರಿಕೆ ಬಿಸಿ ತಟ್ಟಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News