ಮುಂಬೈನ ಶಿವಸೇನೆ ಶಾಸಕ ದುಬೈನಲ್ಲಿ ಹೃದಯಾಘಾತದಿಂದ ನಿಧನ

Update: 2022-05-12 05:02 GMT
Photo:twitter

ಮುಂಬೈ: ಮುಂಬೈನ ಶಿವಸೇನೆ ಶಾಸಕ ರಮೇಶ್ ಲಟ್ಕೆ ಅವರು ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

"ರಮೇಶ ಲಟ್ಕೆ ಅವರು ಬುಧವಾರ ದುಬೈನಲ್ಲಿ ನಿಧನರಾದರು. ಅವರು ತಮ್ಮ ಕುಟುಂಬದೊಂದಿಗೆ  ದುಬೈಗೆ ಪ್ರವಾಸ ಕೈಗೊಂಡಿದ್ದರು" ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

ಲಟ್ಕೆ ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಿವಸೇನೆ ಶಾಸಕರಾಗಿ ಚುನಾಯಿತರಾಗಿದ್ದರು.

"ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ  ಪಕ್ಷದ ಇತರ ಹಿರಿಯ ನಾಯಕರಿಗೆ ಅವರ ಮೃತದೇಹವನ್ನು ಭಾರತಕ್ಕೆ ತರಲು ಕಾರ್ಯವಿಧಾನವನ್ನು ಆರಂಭಿಸುವ ಬಗ್ಗೆ ತಿಳಿಸಿದ್ದೇವೆ. ಗುರುವಾರ ಮೃತದೇಹವನ್ನು ಮರಳಿ ತರಬಹುದು  ಎಂದು ನಾವು ಭಾವಿಸುತ್ತೇವೆ" ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News