ವಾರಣಾಸಿ ಮಸೀದಿಯ ಚಿತ್ರೀಕರಣ ಪ್ರಶ್ನಿಸಿ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

Update: 2022-05-13 07:06 GMT

ಲಕ್ನೋ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಯಥಾಸ್ಥಿತಿಗೆ ಆದೇಶಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಆದಾಗ್ಯೂ, ಮಸೀದಿಯಲ್ಲಿ ನಡೆಯುತ್ತಿರುವ ವೀಡಿಯೋಗ್ರಫಿಯನ್ನು ಪ್ರಶ್ನಿಸುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡಲು ನ್ಯಾಯಾಲಯ ಒಪ್ಪಿಕೊಂಡಿದೆ.

ಮಸೀದಿಯ ಚಿತ್ರೀಕರಣವು ನಾಳೆಯಿಂದ ಆರಂಭವಾಗಲಿದ್ದು, ಚಿತ್ರೀಕರಣಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.

 ಮಸೀದಿ ಆವರಣದ ಸಮೀಕ್ಷೆ ಹಾಗೂ  ಚಿತ್ರೀಕರಣ ನಡೆಸುವ ಆದೇಶವು ಪೂಜಾ ಸ್ಥಳಗಳ ಕಾಯಿದೆ, 1991 ಕ್ಕೆ ವಿರುದ್ಧವಾಗಿದೆ ಎಂದು ವಕೀಲ ಹುಝೆಫಾ ಅಹ್ಮದಿ ಅವರು ಅರ್ಜಿ ಸಲ್ಲಿಸಿದ್ದಾರೆ.

ವಾರಣಾಸಿಯ  ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೆ ಕಾರ್ಯ ಮುಂದುವರಿಯಲಿದೆ ಎಂದು ಸ್ಥಳೀಯ ನ್ಯಾಯಾಲಯವು ಗುರುವಾರ ತನ್ನ ಆದೇಶದಲ್ಲಿ ಹೇಳಿತ್ತು.

ಪ್ರಕರಣದ ಮುಂದಿನ ವಿಚಾರಣಾ ದಿನಾಂಕವಾದ ಮೇ 17ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿ ವಿವರವಾದ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಆದೇಶಿಸಿದೆ ಎಂದು ಅರ್ಜಿದಾರರಲ್ಲೋರ್ವರ ಪರ ವಕೀಲ ಸುಭಾಶ್ ನಂದನ್ ಚತುರ್ವೇದಿ ತಿಳಿಸಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News