ಹಿಜಾಬ್‌ ಧರಿಸುವುದು, ಧರಿಸದೆ ಇರುವುದು ಅವರವರ ವೈಯಕ್ತಿಕ ಆಯ್ಕೆ: ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್

Update: 2022-05-23 17:30 GMT

ಹೈದರಾಬಾದ್: ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್ “ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುವುದರ” ಎದ್ದಿರುವ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಬ್ಬರ ಉಡುಪು ಸಂಪೂರ್ಣವಾಗಿ ಅವರ ಆಯ್ಕೆಯ ವಿಷಯವಾಗಿದೆ ಎಂದು ಅವರು ಹೇಳಿರುವುದಾಗಿ ndtv ವರದಿ ಮಾಡಿದೆ.

"ಇದು ಸಂಪೂರ್ಣವಾಗಿ ಅವರ ಸ್ವಂತ ಆಯ್ಕೆಯಾಗಿದೆ, ಅವರ ಆಯ್ಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ, ನನಗೆ ನನ್ನದೇ ಆದ ಆಯ್ಕೆ ಇದೆ. ನಾನು ಅಂತಹ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತೇನೆ. ಅಂತಹ ಬಟ್ಟೆಗಳನ್ನು ಧರಿಸಲು ನನಗೆ ಅಭ್ಯಂತರವಿಲ್ಲ. ನನ್ನ ಕುಟುಂಬವು ಅಂತಹ ಬಟ್ಟೆಗಳನ್ನು ಧರಿಸುವುದರ ಬಗ್ಗೆ ಏನೂ ಅಂದುಕೊಳ್ಳುವುದಿಲ್ಲ. ಹಾಗಾಗಿ, ಜನರು ನನ್ನ ಬಗ್ಗೆ ಏನು ಹೇಳುತ್ತಾರೆಂದು ನಾನು ಹೆದರುವುದಿಲ್ಲ, ”ಎಂದು ಝರೀನ್ ಎನ್‌ಡಿಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

"ಆದರೆ ಅವರು ಹಿಜಾಬ್ ಧರಿಸಲು ಮತ್ತು ಅವರ ಧರ್ಮವನ್ನು ಅನುಸರಿಸಲು ಬಯಸಿದರೆ, ಅದು ಅವರ ವೈಯಕ್ತಿಕ ಆಯ್ಕೆ. ಅವರು ಹಿಜಾಬ್ ಧರಿಸುವುದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಎಲ್ಲಕ್ಕಿಂತ ಮೊದಲು, ಇದು ಅವರ ಸ್ವಂತ ಆಯ್ಕೆಯಾಗಿದೆ" ಎಂದು ನಿಖಾತ್ ಝರೀನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News