"ಸರ್ವಿಸ್‌ ಚಾರ್ಜ್‌ ಕಡ್ಡಾಯವಲ್ಲ": ರಾಷ್ಟ್ರೀಯ ರೆಸ್ಟಾರೆಂಟ್ ಅಸೋಸಿಯೇಶನ್ ಸಭೆ ನಡೆಸಲಿರುವ ಕೇಂದ್ರ

Update: 2022-05-24 13:15 GMT

ಹೊಸದಿಲ್ಲಿ: ಸೇವಾ ಶುಲ್ಕ ಪಾವತಿಸುವುದು ಸ್ವಯಂಪ್ರೇರಿತವಾದರೂ ರೆಸ್ಟಾರೆಂಟ್‍ಗಳು ಗ್ರಾಹಕರಿಂದ ಬಲವಂತವಾಗಿ ಈ ಶುಲ್ಕ ಸಂಗ್ರಹಿಸುತ್ತಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 2ರಂದು ರಾಷ್ಟ್ರೀಯ ರೆಸ್ಟಾರೆಂಟ್ ಅಸೋಸಿಯೇಶನ್ ಸಭೆ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಇತರ ಶುಲ್ಕಗಳ ಹೆಸರಿನಲ್ಲಿ ರೆಸ್ಟಾರೆಂಟ್‍ಗಳು ಅಂತಿಮ ಬಿಲ್‍ನಲ್ಲಿ ಸೇವಾ ಶುಲ್ಕ ಸೇರಿಸುವುದು ಹಾಗೂ ಇದು ಐಚ್ಛಿಕವೆಂದು ಗ್ರಾಹಕರಿಗೆ ಹೇಳದೇ ಇರುವುದನ್ನು ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ರೆಸ್ಟಾರೆಂಟ್ ಅಸೋಸಿಯೇಶನ್‍ಗೆ ಪತ್ರ ಬರೆದಿದ್ದರಲ್ಲದೆ ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಬಗ್ಗೆ ಹಾಗೂ ಅದರ ಬಗ್ಗೆ ಪ್ರಶ್ನಿಸಿದ ಗ್ರಾಹಕರಿಗೆ ಕಿರುಕುಳ ನೀಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಸೇವಾ ಶುಲ್ಕ ಪಾವತಿಸಲು ಒಪ್ಪಿದರೆ ಮಾತ್ರ ಆಹಾರ ಆರ್ಡರ್ ಮಾಡಬಹುದೆಂಬ ಕಟ್ಟುಪಾಡುಗಳನ್ನು ವಿಧಿಸುವುದು ಗ್ರಾಹಕ  ರಕ್ಷಣೆ ಕಾಯಿದೆಯ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News