"ನನ್ನ 8 ವರ್ಷದ ಆಡಳಿತದಲ್ಲಿ ಜನರಿಗೆ ಅಪಮಾನವಾಗುವ ಯಾವ ಕೆಲಸವನ್ನೂ ನಾನು ಮಾಡಿಲ್ಲ": ನರೇಂದ್ರ ಮೋದಿ

Update: 2022-05-28 15:21 GMT

ಅಹ್ಮದಾಬಾದ್: "ಮಹಾತ್ಮಾ ಗಾಂಧಿ ಹಾಗೂ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ರವರ ಕನಸಿನ ದೇಶ ನಿರ್ಮಿಸುವ ನಿಟ್ಟಿನಲ್ಲಿ ಎನ್‌ಡಿಎ ಸರಕಾರದ ನನ್ನ 8 ವರ್ಷದ ಆಡಳಿತದಲ್ಲಿ ದೇಶದ ಜನರು ಅಪಮಾನಕ್ಕೀಡಾಗುವಂತಹ ಯಾವುದೇ ಕೆಲಸ ಮಾಡಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ.

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಅಟ್‌ಕೋಟ್ ಗ್ರಾಮದಲ್ಲಿ ಕೆ.ಡಿ ಪರ್ವಾಡಿಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರದ ಸರ್ಕಾರವು ಮೇ. 26 ರಂದು “ಎಂಟು ವರ್ಷಗಳ ಸೇವೆಯನ್ನು” ಪೂರ್ಣಗೊಳಿಸಿದೆ ಎಂದು ಸಭೆಯಲ್ಲಿ ತಿಳಿಸಿದರು. ಇದೇ ವೇಳೆ, ಎಂಟು ವರ್ಷಗಳ ಹಿಂದೆ ಮೌಲ್ಯಗಳನ್ನು ಕಳಿಸಿ ದಿಲ್ಲಿಗೆ ಕಳಿಸಿದ್ದಕ್ಕಾಗಿ ಅವರು ಗುಜರಾತ್ ಜನರಿಗೆ ಧನ್ಯವಾದ ಹೇಳಿದರು.

“ನೀವು ನನಗೆ ಕಲಿಸಿದ ಮೌಲ್ಯಗಳು, ನೀವು ನನಗೆ ನೀಡಿದ ಶಿಕ್ಷಣ, ಸಮಾಜಕ್ಕಾಗಿ ಹೇಗೆ ಬದುಕಬೇಕು ಎಂದು ನೀವು ನನಗೆ ಕಲಿಸಿದ ಪಾಠಗಳಿಗೆ ಧನ್ಯವಾದಗಳು, ಕಳೆದ ಎಂಟು ವರ್ಷಗಳಿಂದ ನಾನು ಮಾತೃಭೂಮಿಯ ಸೇವೆಯಲ್ಲಿ ಹಿಂಜರಿಯಲಿಲ್ಲ. ಇದು ನಿಮ್ಮ ಸಂಸ್ಕಾರ (ಮೌಲ್ಯ) ಈ ಮಣ್ಣು ಪೂಜ್ಯ ಬಾಪು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯ ಭೂಮಿ, ಎಂಟು ವರ್ಷಗಳಲ್ಲಿ, ನನ್ನ 8 ವರ್ಷದ ಆಡಳಿತದಲ್ಲಿ ದೇಶದ ಜನರು ಅಪಮಾನಕ್ಕೀಡಾಗುವಂತಹ ಯಾವುದೇ ಕೆಲಸ ಮಾಡಲಿಲ್ಲ ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News