ಮೂರು ದಿನ ಮುಂಚಿತವಾಗಿ ಕೇರಳವನ್ನು ಪ್ರವೇಶಿಸಿದ ನೈಋತ್ಯ ಮಾನ್ಸೂನ್

Update: 2022-05-29 07:11 GMT
Photo: PTI

ಹೊಸದಿಲ್ಲಿ: ಜೂನ್ 1 ರ ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ನೈಋತ್ಯ ಮುಂಗಾರು ರವಿವಾರ ಕೇರಳದಲ್ಲಿ ಆರಂಭವಾಗಿದೆ ಹವಾಮಾನ ಕಚೇರಿ ತಿಳಿಸಿದೆ.

ನೈಋತ್ಯ ಮಾನ್ಸೂನ್ ಅನ್ನು ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿ ಎಂದು ಪರಿಗಣಿಸಲಾಗಿದೆ.

"ನೈಋತ್ಯ ಮಾನ್ಸೂನ್ ಜೂನ್ 1 ರ ಸಾಮಾನ್ಯ ದಿನಾಂಕಕ್ಕಿಂತ ಮೊದಲು ಮೇ 29 ರ ರವಿವಾರದಂದು ಕೇರಳವನ್ನು ಪ್ರವೇಶಿಸಿದೆ’’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News